Thursday , July 18 2024
Home / Breaking News / ತಾವರಗೇರಾ: ಕಾರು ಅಡ್ಡಗಟ್ಟಿ ಹಾಡು ಹಗಲೇ 5 ಲಕ್ಷರೂ ದರೋಡೆ..!

ತಾವರಗೇರಾ: ಕಾರು ಅಡ್ಡಗಟ್ಟಿ ಹಾಡು ಹಗಲೇ 5 ಲಕ್ಷರೂ ದರೋಡೆ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಪಟ್ಟಣದ ಸಮೀಪದ ಕಿಲ್ಲಾರಹಟ್ಟಿ ಡಗ್ಗಿ ಹತ್ತಿರ ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಕಾರ್ ವೊಂದನ್ನು ಅಡ್ಡಗಟ್ಟಿ ದುಷ್ಕರ್ಮಿಗಳು 5 ಲಕ್ಷ ರೂ ದರೋಡೆ ಮಾಡಿದ ಘಟನೆ ನಡೆದಿದೆ.

ಲಿಂಗಸಗೂರಿನಿಂದ ಕೊಪ್ಪಳಕ್ಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ , ಲಿಂಗಸೂರ ಪಟ್ಟಣದ ಶಿವಾನಂದ ಐದನಾಳ, ವಿಜಯ ಮಹಾಂತೇಶ ಪಲ್ಲೇದ ಹಾಗೂ ಖಾಲೀದ್ ಅಹ್ಮದ್ ಅವರು 5 ಲಕ್ಷ ರೂ ಗಳನ್ನು ತೆಗೆದುಕೊಂಡು ಇನೋವಾ ಕಾರ್ ನಲ್ಲಿ ಕೊಪ್ಪಳಕ್ಕೆ ತೆರಳುತ್ತಿದ್ದಾಗ , ಕಿಲ್ಲಾರಹಟ್ಟಿ ಡಗ್ಗಿ ಹತ್ತಿರದ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಬೈಕ್ ನಲ್ಲಿ 5 ಜನ ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿ , ಬ್ಲೇಡಿ ನಿಂದ ಗಾಯಗೊಳಿಸಿ 5 ಲಕ್ಷರೂ ಹಣ ದೋಚಿದ್ದಾರೆ,

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ ಪಿ ಯಶೋಧಾ ವಂಟಗೋಡಿ , ಸ್ಥಳೀಯ ಪಿಎಸ್ ಐ ಗಳಾದ ನಾಗರಾಜ ಕೊಟಗಿ, ಮಲ್ಲಪ್ಪ ವಜ್ರದ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ತಾವರಗೇರಾ:- ವಾಹನ ಸವಾರರೇ ಎಚ್ಚರ, ಯಾಮಾರಿದ್ರೆ ಬಿಳುತ್ತೆ ದಂಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಾಹನ ಸವಾರರೇ ಎಚ್ಚರ ಅತಿಯಾದ ವೇಗದ ಚಲಾವಣೆಯಿಂದ ಬಾರಿ ದಂಡ ವಿಧಿಸಲಾಗುತ್ತದೆ ಅಪಘಾತ …

error: Content is protected !!