ತಾವರಗೇರಾ: ಶೌಚಾಲಯ ಗೋಡೆ ಕುಸಿತ, ಇಬ್ಬರ ಸಾವು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ 5ನೇ ವಾರ್ಡಿನ ಶೀಥಿಲಾವಸ್ತೆಯಲ್ಲಿದ್ದ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆ ಕುಸಿದು ಬಿದ್ದು ಇಬ್ಬರು ದಾರುಣ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಭಾನು ಬೇಗಂ ಖಾಜಿ ಹಾಗೂ ಉಮಾ ಬಾಯಿ ಬಪ್ಪರಗಿ ಎಂದು ಗುರುತಿಸಲಾಗಿದ್ದು ಮತ್ತೊಬ್ಬ ಮಹಿಳೆಗೆ ಗಾಯಗಳಾಗಿವೆ, ಕುಸಿದ ಶೌಚಾಲಯವನ್ನು ಯಾರು ಉಪಯೋಗಿಸದಂತೆ ಪಟ್ಟಣ ಪಂಚಾಯಿತಿಯು ನಿಷೇದಿಸಿತ್ತು ,

ಮಳೆಯಿಂದಾಗಿ ಕಟ್ಟಡ ನೆನೆದಿದ್ದು , ರಾತ್ರಿ ವೇಳೆ ಮಹಿಳೆಯರು ಬಹಿರ್ದೆಸೆ ಗೆ ಹೋದ ಸಂದರ್ಭದಲ್ಲಿ ಗೋಡೆ ಕುಸಿದು ಘಟನೆ ಸಂಭವಿಸಿದೆ , ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾತ್ರಿ ಜಿಲ್ಲಾಧಿಕಾರಿ ನಳೀನ ಅತುಲ್ , ಎಸ್ ಪಿ ಯಶೋಧಾ ವಂಟಗೋಡಿ, ಡಿವಾಯ ಎಸ್ ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶ್ವಂತ ಬೀಸನಹಳ್ಳಿ , ತಹಶಿಲ್ದಾರ ರವಿ ಎಸ್ ಅಂಗಡಿ , ಪಪಂ ಮುಖ್ಯಾಧಿಕಾರಿ ನಬೀಸಾಬ ಖುದನ್ನವರ, ಪಿಎಸ್ ಐ ಸುಜಾತ ನಾಯಕ, ಗ್ರೇಡ್2 ತಹಶಿಲ್ದಾರರ ಮುರುಳಿದರ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ ಸೇರಿದಂತೆ ಕಂದಾಯ ಇಲಾಖೆಯ ನೌಕರರು ಭೇಟಿ ನೀಡಿ ಪರಿಶೀಲಿದರು.

ಬಳಿಕ ಜಿಲ್ಲಾಧಿಕಾರಿಗಳು ಮೃತ ಮಹಿಳೆಯರಿಬ್ಬರ ಕುಟುಂಬಸ್ಥರಿಗೆ ಹಾಗೂ ಗಾಯಗೊಂಡ ವರಿಗೆ ಪರಿಹಾರ ಚೆಕ್ ವಿತರಿಸಿದರು.

Share this Article
error: Content is protected !!