Sunday , June 23 2024
Home / Breaking News / ತಾವರಗೇರಾ: ಗರ್ಭಿಣಿ ಸಾವು ನ್ಯಾಯಕ್ಕಾಗಿ ಚುನಾವಣಾ ಬಹಿಷ್ಕಾರ..!

ತಾವರಗೇರಾ: ಗರ್ಭಿಣಿ ಸಾವು ನ್ಯಾಯಕ್ಕಾಗಿ ಚುನಾವಣಾ ಬಹಿಷ್ಕಾರ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ :- ಸಮೀಪದ ವಿಠಲಾಪೂರ ಮತದಾರರು ಇದೇ ದಿ.7 ರಂದು ನಡೆಯುವ ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ ಮಾಡಲಿದ್ದಾರೆ.
  ಎಪ್ರಿಲ್ 30 ರಂದು ರಾತ್ರಿ ವಿಠಲಾಪೂರದ ಲಕ್ಷ್ಮೀ ಎಂಬ ಗರ್ಭಿಣಿಯು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದಾಗ , ವೈದ್ಯಾಧಿಕಾರಿ ಡಾ.ಕಾವೇರಿ ಯವರ ನಿರ್ಲಕ್ಷ್ಯ ದಿಂದ ಲಕ್ಷ್ಮೀ ಮೃತಪಟ್ಟಿದ್ದಳು, ಅದಕ್ಕೆ ವಿಠಲಾಪೂರದ ರೊಚ್ಚಿಗೆದ್ದ ಸ್ಥಳೀಯ ನೂರಾರು ಜನರು ಆಸ್ಪತ್ರೆ ಮುಂದೆ ಧರಣಿ ಹೂಡಿ , ವೈದ್ಯೆಯನ್ನು ಕೂಡಲೇ ಸಂಜೆ ಯೊಳಗಾಗಿ ಅಮಾನತು ಮಾಡಬೇಕೆಂದು ಪಟ್ಟು ಹಿಡಿದಿದ್ದರು, ನಾಲ್ಕು ದಿನ ಕಳೆದರೂ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದು ಕೊಂಡಿಲ್ಲ, ಆದ್ದರಿಂದ ವಿಠಲಾಪೂರದ ಎಲ್ಲಾ ಜನ ಒಕ್ಕಟ್ಟಿನಿಂದ ಮತದಾನ ಬಹಿ
ಷ್ಕಾರ ಮಾಡುವದಾಗಿ ಘೋಷಣೆ ಮಾಡಿದ್ದರು.

ಸುದ್ದಿ ತಿಳಿದ ತಾಲೂಕ ದಂಡಾಧಿಕಾರಿಗಳಾದ ರವಿ ಅಂಗಡಿ, ತಾಲೂಕು ಸಿಪಿಐ ಯಶವಂತ ಬಿಸನಳ್ಳಿ, ತಾವರಗೇರಾ ಪಿಎಸ್ಐ ಸುಜಾತಾ ನಾಯಕ, ನಾಡ ತಹಶಿಲ್ದಾ ರರಾದ ಪ್ರಕಾಶ, ಉಪತಹಶೀಲ್ದಾರ ಮುರಳೀಧರ , ಕಂದಾಯ ನಿರೀಕ್ಷಕ ಶರಣಪ್ಪ , ಸೂರ್ಯ ಕಾಂತ , ಜೆಸ್ಕಾಂನ ಸೆಕ್ಷನ್ ಜೆಇ ರಶ್ಮೀ ಚವ್ಹಾಣ , ಪಪಂ ಮುಖ್ಯಾಧಿಕಾರಿ ನಬೀಸಾಬ ಖುದನ್ನವರ ಮುಂತಾದ ಅಧಿಕಾರಿಗಳು ವಿಠಲಾಪೂರಕ್ಕೆ ಶನಿವಾರ ದೌಡಾಯಿಸಿದರು.

ತಹಶೀಲ್ದಾರ್ ರವಿ ಯವರು ಮಾತನಾಡಿ, ಮತದಾನ ಮಾಡುವದು ಪ್ರತಿಯೊಬ್ಬರ ಹಕ್ಕು, ನಿಮಗೆ ನ್ಯಾಯ ಒದಗಿಸುವದು ನಮ್ಮ ಕರ್ತವ್ಯ, ಚುನಾವಣಾ ನಂತರ ವೈದ್ಯಾಧಿಕಾರಿಯ ಪ್ರಕರಣ ಕೈಗೆತ್ತಿ ಕೊಂಡು ಸೂಕ್ತ ಕ್ರಮ ತೆಗೆದು ಕೊಳ್ಳುತ್ತೇವೆ , ಆದರೆ ಮತದಾನ ಬಹಿಷ್ಕರಿಸ ಬೇಡಿರಿ ಎಂದು ಮನವಿ ಮಾಡಿ ಕೊಂಡರು.

ಅದರಂತೆ ಸಿಪಿಐ ಯಶವಂತ ಬೀಸನಳ್ಳಿ ಅವರೂ ಸಹ ಮನವಿ ಮಾಡಿದರು. ಆದರೆ ಎಲ್ಲರದೂ ಒಂದೇ ಹಠ ವಾಗಿತ್ತು.
ದಿನಾಂಕ 7 ರಂದು ನಡೆಯುವ ಚುನಾವಣೆಗೆ ಅಥವಾ ಮತದಾನ ಕೇಂದ್ರಕ್ಕೆ ಗ್ರಾಮದ ಜನ
ಯಾರೂ ಅಡ್ಡಿ ಪಡಿಸುವದಿಲ್ಲ ಕರ್ತವ್ಯ ದ ಮೇಲೆ ಬರುವ ಸರ್ಕಾರಿ ನೌಕರರಿಗೆ ಯಾವದೇ ತೊಂದರೆ ಕೊಡುವದಿಲ್ಲ. ಬೇಕಾದರೆ ನಮ್ಮ ಮನೆಯಲ್ಲಿ ಊಟ, ಉಪಹಾರ ಮಾಡಲಿ ಬೇಡ ಎನ್ನುವದಿಲ್ಲ. ಆದರೆ ನಮಗೆ ನ್ಯಾಯ ಬೇಕು, ಮತದಾನದ ಮುಂಚೆಯೇ ವೈದ್ಯೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಎಂದು ಗ್ರಾಮದ ಹಿರಿಯರಾದ ಅಮರೇಶಪ್ಪ
ರಡ್ಡೇರ , ವಕೀಲ ಕಳಕನಗೌಡ ಪಾಟೀಲ, ಶಂಕ್ರಪ್ಪ ರೋಣದ, ಈಶಪ್ಪ ರೋಣದ , ಕನ ಕಪ್ಪ ಬನ್ನೇರಿ , ಶರಣಯ್ಯ ಹಿರೇಮಠ ,ದೇವೇಂದ್ರಪ್ಪ ಗುರಿಕಾರ ಸೇರಿದಂತೆ ವಿಠಲಾಪುರದ ಪ್ರಮುಖರು ಅಗ್ರಹಿಸಿದರು.

About N Shameed

Check Also

ಬುಲೆರೋ ವಾಹನ ಕಳ್ಳ , ಸಿನಿಮೀಯ ರೀತಿಯಲ್ಲಿ ಪರಾರಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಬೊಲೆರೋ ವಾಹನ ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು ಪೊಲೀಸರು ಅದೇ ಗಾಡಿಯಲ್ಲಿ ಕರೆದುಕೊಂಡು ಹೋಗುವಾಗ …

One comment

  1. Sir idu tavaragera ge sambandaa illva pakkd Halli anta hakiidira pp sambanda illwa hagidre

error: Content is protected !!