ತಾವರಗೇರಾ:- ಲೋಕಸಭೆ ಚುನಾವಣೆ, ಅರೆ ಮಿಲಟರಿ ಪಡೆ ಪಥಸಂಚಲನ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ :- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಪಿಐ ಯಶ್ವಂತ್ ಬಿಸನಳ್ಳಿ ಹೇಳಿದರು.

ಅವರು ಪಟ್ಟಣದಲ್ಲಿ ಶುಕ್ರವಾರದಂದು ನಡೆದ ಅರೆ ಮಿಲಿಟರಿ ಪಡೆಯ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಥ ಸಂಚಲನ ನಡೆಸಲಾಯಿತು.

ಈ ಸಂದರ್ಭದಲ್ಲಿ ಠಾಣಾಧಿಕಾರಿ ಸುಜಾತ ನಾಯಕ್, ಪಟ್ಟಣ ಪಂಚಾಯತಿಯ ಸಿಬ್ಬಂದಿಗಳಾದ ಶಾಮೂರ್ತಿ ಕಟ್ಟಿಮನಿ, ಶರಣಪ್ಪ ಸೈಂದರ್,, ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಮತ್ತು ಕಂದಾಯ ಇಲಾಖೆಯ ಸೂರ್ಯಕಾಂತ್ ಮಸ್ಕಿ ಇನ್ನಿತರರು ಉಪಸ್ಥಿತರಿದ್ದರು. ಹಾಗು ಅರೆ ಮಿಲಿಟರಿ ಪಡೆಯ ಕಮ್ಯಾಂಡರ್ ಗಳಾದ ಜೇಮ್ಸ್ ಓವಿಂಗಾ,  ಯತ್ಸಾಂಗಬಾ ಸೇರಿದಂತೆ 60 ಜನ ಸಿಬ್ಬಂದಿ ಪಥಸಂಚಲನ ದಲ್ಲಿ ಪಾಲ್ಗೊಂಡಿದ್ದರು.

Share this Article
error: Content is protected !!