Monday , May 20 2024
Home / Breaking News / ತಾವರಗೇರಾ: ಗರ್ಭಿಣಿ ಸಾವು, ವೈದ್ಯಾಧಿಕಾರಿ ಅಮಾನತ್ತಿಗೆ ಪ್ರತಿಭಟನೆ..!

ತಾವರಗೇರಾ: ಗರ್ಭಿಣಿ ಸಾವು, ವೈದ್ಯಾಧಿಕಾರಿ ಅಮಾನತ್ತಿಗೆ ಪ್ರತಿಭಟನೆ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ :- ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ , ಪ್ರಥಮ ಹೆರಿಗೆ ಸಮಯದಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯತನ ದಿಂದ ಹೆರಿಗೆ ಆಗುವ ಮುಂಚೆಯೇ ಗರ್ಭಿಣಿ ಯು   ಮಂಗಳವಾರ ರಾತ್ರಿ ಹತ್ತು ಗಂಟೆಗೆ ಮೃತ ಪಟ್ಟಿದ್ದಾಳೆ.
ಪಟ್ಟಣದ ವಿಠಲಾಪೂರನ ಲಕ್ಷ್ಮೀ ನೇಮಿನಾತ ಮುಗುದುಮ್ ( 20 ) ಎಂಬ ಯುವತಿಯ ಮದುವೆಯು ಒಂದು ವರೆ
ವರ್ಷದ ಹಿಂದೆ ಆಗಿತ್ತು. ಪ್ರಥಮ ಹೆರಿಗೆ ಗೆಂದು ತಾವರಗೇರಾದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿತ್ತು, ಆದರೆ ಮಹಿಳಾ ವೈದ್ಯಾಧಿಕಾರಿ ಡಾ.ಕಾವೇರಿ ಶಾವಿ ಹೆರಿಗೆ ಸಂದರ್ಭದಲ್ಲಿ ತೀರಾ ನಿರ್ಲಕ್ಷ್ಯ ವಹಿಸಿದ ಕಾರಣ ಹೊಟ್ಟೆ ಯೊಳಗಿನ ಮಗು ಸಮೇತ , ತಾಯಿಯು ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿಠಲಾಪೂರದ ವಕೀಲ ಕಳಕನಗೌಡರ ನೇತೃತ್ವದಲ್ಲಿ ನೂರಾರು ಜನರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಡಾ.ಕಾವೇರಿ ಶಾವಿ ಯನ್ನು ಸಸ್ಪೆಂಡ್ ಮಾಡಲು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತರು ರಾತ್ರಿಯಾದ್ಯಂತ ಪ್ರತಿಭಟನೆ ನಡೆಸಿ ಬುಧುವಾರದ ವರೆಗೆ ಆಸ್ಪತ್ರೆ ಮುಂದೆ ಧರಣಿ ನಡೆಸಿದರು ಸ್ಥಳಕ್ಕೆ ಗಂಗಾವತಿ ಡಿವೈಎಸ್ಪಿ, ಕುಷ್ಟಗಿ ತಹಸೀಲ್ದಾರರಾದ ರವಿ ಅಂಗಡಿ ಹಾಗೂ ಸಿಪಿಐ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯಂತೆ ಮನವಿ ಮಾಡಿಕೊಂಡರು, ಕೂಡ ವಿವಿಧ ಸಂಘಟನೆಗಳ ಮುಖಂಡರು ತಕ್ಷಣವೇ ವೈದ್ಯಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಇಲ್ಲದಿದ್ದರೆ ಹೋರಾಟ ಮುಂದುವರೆಸುತ್ತೇವೆಂದು ಪಟ್ಟು ಹಿಡಿದರು, ನಂತರ ತಹಶೀಲ್ದಾರರು ಮನವಿ ಸ್ವೀಕರಿಸಿ ಮಾತನಾಡಿ ವೈದ್ಯಾಧಿಕಾರಿ ಯನ್ನು ತಕ್ಷಣದಿಂದಲೇ ಕಡ್ಡಾಯ ರಜೆ ಪಡಿಯಬೇಕೆಂದು ಹಾಗೂ ಇನ್ನು ಮುಂದೆ ಯಾವುದೇ ಕಾರಣಕ್ಕೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದಂತೆ ಕ್ರಮ ಕೈಗೊಳ್ಳುವುದಾಗಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಮೇಲಾಧಿಕಾರಿಗಳ ಗಮನಕ್ಕೆ. ತರುವುದಾಗಿ ಹೇಳಿದರು ಆದರೂ ಕೂಡ ಸಮಯ ಕೇಳಿದ ಪ್ರತಿಭಟನಾಕಾರರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

About N Shameed

Check Also

ತಾವರಗೇರಾ:- ಸಿಡಿಲು ಬಡಿದು ಯುವಕ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಹಿರೇಮುಕರ್ತನಾಳ ಗ್ರಾಮದ ಹೊರ …

error: Content is protected !!