Monday , May 20 2024
Home / Breaking News / ತಾವರಗೇರಾ : ಶಿಕ್ಷಕ ಎಲ್ಲಪ್ಪ ಬಿದರಿ ಇನ್ನಿಲ್ಲ..!

ತಾವರಗೇರಾ : ಶಿಕ್ಷಕ ಎಲ್ಲಪ್ಪ ಬಿದರಿ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕಿಲ್ಲಾರಹಟ್ಟಿ   ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಲ್ಲಪ್ಪ ಬಿದರಿ ಅವರು ಅನಾರೋಗ್ಯದಿಂದ ಮಂಗಳವಾರದಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಯನ್ನು ಅಗಲಿದ್ದು, ಕುಷ್ಟಗಿ ತಾಲೂಕಿನ ಶಿಕ್ಷಕರ ಬಳಗ ಇವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದೆ. ಮೂಲತಃ ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮದ ಎಲ್ಲಪ್ಪ ಬಿದರಿಯವರು ಶಿಕ್ಷಕರಾಗಿ ತಾವರಗೇರಾ ಹೋಬಳಿಯಲ್ಲಿ ಕೆಲಸ ಮಾಡಿದ್ದು, ಸಾರ್ವಜನಿಕರಲ್ಲಿ ಕೂಡ ತಮ್ಮ ಉತ್ತಮ ಬಾಂಧವ್ಯ ಹೊಂದಿದ್ದರು ಇವರ ನಿಧನಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಸುರೇಂದ್ರ ಕಾಂಬಳೆ ಹಾಗೂ ತಾಲೂಕಿನ ಶಿಕ್ಷಕ ವೃಂದದವರು , ಹೋಬಳಿಯ ಸಿ ಆರ್ ಸಿ, ಬಿ ಆರ್ ಸಿ ಅಧಿಕಾರಿಗಳು ಮತ್ತು ಶಿಕ್ಷಕರು ಅತಿವ ದುಃಖ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಬಬಲೇಶ್ವರದಲ್ಲಿ ಬುಧವಾರದಂದು ನಡೆಯಲಿದೆ ಎಂದು ತಿಳಿದು ಬಂದಿದೆ.

About N Shameed

Check Also

ತಾವರಗೇರಾ:- ಸಿಡಿಲು ಬಡಿದು ಯುವಕ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಹಿರೇಮುಕರ್ತನಾಳ ಗ್ರಾಮದ ಹೊರ …

error: Content is protected !!