Monday , May 20 2024
Home / Breaking News / ಕುಷ್ಟಗಿ:- ಗಂಡ ಹೆಂಡತಿ ಕಲಹ , ಹೆಂಡತಿ ಸಾವಿನಲ್ಲಿ ಅಂತ್ಯ..!

ಕುಷ್ಟಗಿ:- ಗಂಡ ಹೆಂಡತಿ ಕಲಹ , ಹೆಂಡತಿ ಸಾವಿನಲ್ಲಿ ಅಂತ್ಯ..!

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಕುಡಿಯುವ ಚಟಕ್ಕೆ ದಾಸನಾಗಿದ್ದ ವ್ಯಕ್ತಿಗೆ ಆತನ ಹೆಂಡತಿಯು ಬುದ್ದಿವಾದ ಹೇಳುವ ಸಂದರ್ಭದಲ್ಲಿ ಇಬ್ಬರ ನಡುವೆ ಕಲಹ ಉಂಟಾಗಿ ಪತ್ನಿಯು ಸಾವನ್ನಪ್ಪಿರುವ ಘಟನೆ ತಾಲೂಕಿನ ಮದ್ನಾಳ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿ ಯನ್ನು ಶಶಿಕಲಾ (ನಿರ್ಮಲಾ) ಎಂದು ಗುರುತಿಸಲಾಗಿದೆ . ಆರೋಪಿ ಹನುಮಂತ ಪೊಲೀಸ್ ಪಾಟೀಲ್ ನು‌ ಬುಧುವಾರ ರಾತ್ರಿ ಕುಡಿದುಕೊಂಡು ಮನೆಗೆ ಬಂದಾಗ ಹೆಂಡತಿ ಯು ಕುಡಿಯ ಬೇಡ ಎಂದು ಬುದ್ದಿವಾದ ಹೇಳಿದ್ದಾಳೇ, ಇದೇ ಕಾರಣಕ್ಕೆ ಇಬ್ಬರಿಗು ಜಗಳವಾಗಿದ್ದು ವಿಕೋಪಕ್ಕೆ ಹೋಗಿ ಹೆಂಡತಿ ಸಾವಿಗೆ ಕಾರಣವಾಗಿದೆ.

ಸತ್ತ ದುರ್ದೈವಿ ಗೆ 1 ವರ್ಷದ ಹೆಣ್ಣು ಮಗುವಿದ್ದು ಈಗ ತಾಯಿಯನ್ನು ಕಳೆದು ಕೊಂಡು ಅನಾಥವಾಗಿದೆ.

ಹನಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಎಸ್ ಪಿ ಯಶೋಧಾ ವಂಟಗೋಡಿ, ಗಂಗಾವತಿ ಡಿವಾಯ ಎಸ್ ಪಿ ಸಿದ್ದಲಿಂಗಪ್ಪಗೌಡ , ಕುಷ್ಟಗಿ ಸಿಪಿಐ ಯಶ್ವಂತ ಬೀಸನಳ್ಳಿ , ಪಿಎಸ್ ಐ ವಿರುಪಾಕ್ಷಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

About N Shameed

Check Also

ತಾವರಗೇರಾ:- ಸಿಡಿಲು ಬಡಿದು ಯುವಕ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಹಿರೇಮುಕರ್ತನಾಳ ಗ್ರಾಮದ ಹೊರ …

error: Content is protected !!