ತಾವರಗೇರಾ: ಕಾರ್ ಬೈಕ್ ಡಿಕ್ಕಿ ಓರ್ವ ವ್ಯಕ್ತಿ ಸಾವು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕಾರು ಹಾಗೂ ಬೈಕ್ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಒರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು ಇನ್ನಿತರ 6 ಜನರು ಗಾಯಗೊಂಡ ಘಟನೆ ಸಮೀಪದ ಬಚನಾಳ ರಸ್ತೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಿವರಾಜ ಪಿಳಿಗೇರ (23) ಎಂದು ಗುರುತಿಸಲಾಗಿದೆ.
ತಾವರಗೇರಾ ದಿಂದ ಬಚನಾಳ ಗ್ರಾಮಕ್ಕೆ ಶಿವರಾಜ ನು ತನ್ನ ಬೈಕ್ ಮೇಲೆ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ ಕಾರಿನ ಚಾಲಕ ಸೋಮನಾಥ ಹೂಗಾರ ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯ ತನದಿಂದ ಈ ಘಟನೆ ಸಂಭವಿಸಿದ್ದು ಮತ್ತೊಂದು ಬೈಕಿನಲ್ಲಿ ತೆರಳುತ್ತಿದ್ದವರಿಗೂ ಕೂಡ ಕಾರ್ ಡಿಕ್ಕಿ ಹೊಡೆದು ಗಾಯಗಳಾಗಿದ್ದು ಘಟನಾ ಸ್ಥಳ ಕ್ಕೆ ಪಿಎಸ್ಐ ಸುಜಾತ ನಾಯಕ ಹಾಗೂ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!