ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಪಟ್ಟಣದಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ರಾಜಾಸಾಬ ಮಹಮ್ಮದ್ ಸಾಬ ನಾಯ್ಕ ಎಂಬ ವ್ಯಕ್ತಿ , ತನ್ನ ಮೊಬೈಲ್ ದ ಸ್ಟೇಟಸ್ ದಲ್ಲಿ ಪಾಕಿಸ್ತಾನ ಧ್ವಜದ ಫೋಟೊ ಹಾಕಿ , ಸ್ಥಳೀಯ ಮಸೀದಿ ಯೊಂದರಲ್ಲಿ ನಿಯೋಜಿಸಿರುವ ಕಾರ್ಯಕ್ರಮಕ್ಕೆ , ಸ್ಥಳೀಯ ಮುಸಲ್ಮಾನರನ್ನು ಪಾಕಿಸ್ತಾನದ ಪರವಾಗಿ ಸ್ವಾಗತಿಸುತ್ತೇನೆ .ಎಂದು ಹಾಕಿದ ಕಾರಣ , ಭಜರಂಗದಳ ಹಾಗೂ ಇನ್ನಿತರ ಸಂಘಟನೆಗಳು ನೀಡಿದ ದೂರಿನ ಮೇಲೆ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು, ರಾಜಾಸಾಬ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಎಂದು ಠಾಣಾಧಿಕಾರಿ ನಾಗರಾಜ್ ಕೊಟಗಿ ತಿಳಿಸಿದ್ದಾರೆ.