ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಶಾಮೀದ್ ಅಲಿ ದರ್ಗಾದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸುವ ಮೂಲಕ ಮುದುಗಲ್ ಕುಟುಂಬದ ಸದಸ್ಯರು ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಮುದಗಲ್ ಕುಟುಂಬದ ಡಾ. ಶರಣಪ್ಪ ಸೋಲಿ ಕಾಬ್ಳೆ, ಕುಟುಂಬದ ಸದಸ್ಯರು ಸೇರಿಕೊಂಡು ದರ್ಗಾದಲ್ಲಿ 5000 ದೀಪಗಳನ್ನು ಬೆಳಗಿಸಿ ದೀಪಾವಳಿಯ ದೀಪೋತ್ಸವವನ್ನು ಆಚರಿಸಿದರು.
Video Player
00:00
00:00
ಸೌಹಾರ್ದತೆಯ ಸಂಕೇತವಾದ ಶಾಮಿದಲ್ಲಿ ದರ್ಗದಲ್ಲಿ ಅವರ ಕುಟುಂಬ ಸದಸ್ಯರಾದ ಲಕ್ಷ್ಮಿಕಾಂತ್, ಲಕ್ಷ್ಮಿ, ಅಭಿಷೇಕ್ ಹಾಗೂ ಸ್ಥಳೀಯ ದರ್ಗಾದ ಮುತವಲ್ಲಿ ಸೈಯದ್ , ಪಿಎಸ್ಐ ಮಲ್ಲಪ್ಪ ವಜ್ರದ, ಮುಖಂಡರಾದ ಶಂಕರ್ ಸಿಂಗ್ ಹೊಸಮನಿ, ವೆಂಕಟ ಸಿಂಗ್, ನಾರಾಯಣ್ ಸಿಂಗ್ ಹಾಗೂ ಇನ್ನಿತರರಿದ್ದರು.