ಪ್ರಗತಿ ಪರ ಚಿಂತಕ, ಜ್ಞಾನದ “ಭಂಡಾರಿ” ವಿಧಿವಶ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ರಾಜ್ಯದಲ್ಲಿಯ ಪ್ರಗತಿಪರ ಚಿಂತಕರಲ್ಲಿ ಒಬ್ಬರಾಗಿದ್ದ ಹಾಗೂ ಹುಟ್ಟು ಹೋರಾಟಗಾರರಾದ ಮತ್ತು ಅಪಾರ ಜ್ಞಾನದ ಭಂಡಾರ ಹೊಂದಿದ್ದ ಆನಂದ ಭಂಡಾರಿ ವಿಧಿವಶರಾಗಿರುವುದು ದುರಂತವೇ ಸರಿ, ಬಡ ಹಾಗೂ ಶೋಷಿತ ವರ್ಗದ ಧ್ವನಿಯಾಗಿ ರಾಜ್ಯದಲ್ಲಿಯೇ ಮುಂಚೂಣಿ ನಾಯಕರಾಗಿ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು ಅನೇಕ ಬಡ ಕುಟುಂಬ ಹಿಂದುಳಿದ ವರ್ಗದ ಪರ ಸದಾ ಮುಂಚೂಣಿಯಲ್ಲಿ ತಮ್ಮ ಹೋರಾಟದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿ ಯಾವುದೇ ಜಾತಿ ಮತ ಭೇದವಿಲ್ಲದೆ ನ್ಯಾಯ ಕೊಡಿಸುವಲ್ಲಿ ಅವರ ಪಾತ್ರ ಮರೆಯುವಂತಿಲ್ಲ.

ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿ ಯಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿ, ಸಾವಿರಾರು ಜನರ ಪ್ರೀತಿಗೆ ಪಾತ್ರರಾಗಿದ್ದರು ದುರದೃಷ್ಟವಶಾತ್ ಹೃದಯಾಘಾತ ದಿಂದ ಭಾನುವಾರ ರಾತ್ರಿ ನಿಧನರಾಗಿದ್ದು ಸೋಮವಾರದಂದು ಅಂತ್ಯಕ್ರಿಯೆ ನಡೆಯಲಿದೆ.
ಅವರ ನಿಧನದಿಂದಾಗಿ ಅಪಾರ ಬಂಧು ಬಳಗ ಹಾಗೂ ಅವರ ಅಭಿಮಾನಿ ಬಳಗವು ಅವರ ಕುಟುಂಬಕ್ಕೆ ಶಾಂತಿ ಸಿಗಲೆಂದು ಹಾರೈಸಿದ್ದಾರೆ.

ಒಟ್ಟಿನಲ್ಲಿ ಆನಂದ ಭಂಡಾರಿ ಅಂತಹ ಹೋರಾಟಗಾರನನ್ನು ಕಳೆದುಕೊಂಡ ಅವರ ಅಭಿಮಾನಿ ಬಳಗವು ಬಹಳ ದುಃಖ ವ್ಯಕ್ತಪಡಿಸಿದೆ, ಜೊತೆಗೆ ಉದಯ ವಾಹಿನಿ ಕೂಡ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದೆ.

ಸಂತಾಪ:- ಅವರ ನಿಧನಕ್ಕೆ ಸಚಿವರಾದ ಡಾ.ಎಚ್ ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಹನುಮಂತಪ್ಪ ಅಲಕೋಡ, ಅಮರೇಗೌಡ ಬಯ್ಯಾಪುರ, ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಕೆ ಶರಣಪ್ಪ, ಹಸನಸಾಬ ದೋಟಿಹಾಳ ಅಪಾರ ನಾಯಕರು ಹಾಗೂ ಸ್ಥಳೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ‌.

Share this Article
error: Content is protected !!