ತಾವರಗೇರಾ: ಕೇಳಿಸುತಿದೆ, ಕಲ್ಲಿನಲ್ಲಿ ಗಂಟೆಯ ನುಡಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ವಿಶ್ವ ಪ್ರಸಿದ್ಧ ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಸ್ಥಾನದ ಕಂಬಗಳಿಗೆ ಕಿವಿವೊಟ್ಟು ಕೆಳಿದಾಗ ಶಬ್ದ ಹೊರಹೊಮ್ಮುವಂತೆ ಇಲ್ಲಿಯ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ರುವ ಕಲ್ಲು ಬಂಡೆಯೂ ಕೂಡ ಗಂಟೆಯ ಶಬ್ದ ಹಾಗೂ ತಾಮ್ರದ ಪಾತ್ರೆಯ ಶಬ್ದ ಬರುತ್ತಿದ್ದು ಈದು ಸಾರ್ವಜನಿಕರ ಕುತೂಹಲ ಕ್ಕೆ ಕಾರಣವಾಗಿದೆ .

ವಸತಿ ಶಾಲಾ ಆವರಣದಲ್ಲಿ ಎರಡು ಕಲ್ಲು ಬಂಡೆಗಳಿದ್ದು ಮೇಲಿನ ಕಲ್ಲು ಬಂಡೆಗೆ , ಸಣ್ಣ ಕಲ್ಲಿನಿಂದ ಬಾರಿಸಿದಾಗ , ಕಲ್ಲು ಬಂಡೆಯ ಇನ್ನೊಂದು ಭಾಗದಲ್ಲಿ ಕಿವಿಯೊಟ್ಟು ಕೇಳಿದಾಗ ಗಂಟೆ ಶಬ್ದ ಬರುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದ್ದು , ಇತ್ತೀಚೆಗೆ ಆವರಣ ಸ್ವಚ್ಚ ಮಾಡುತ್ತಿದ್ದಾಗ , ಕಲ್ಲು ಬಂಡೆಗಳಿಗೆ ಸುಣ್ಣ ಹೆಚ್ಚಿದ್ದು, ಕೆಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಲ್ಲು ಬಂಡೆಯ ಶಬ್ದ‌ ಗಮನಿಸಿದಾಗ ವಿಶೇಷ ಇರಬಹುದೆಂದು ಆಶ್ಚರ್ಯ ವ್ಯಕ್ತಪಡಿಸಿದ್ದಾಗಿ ,ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಸಂಗನಾಳ ತಿಳಿಸಿದ್ದಾರೆ.

ಜೊತೆಗೆ ಈ ಕಲ್ಲು ಬಂಡೆ ವಿಷೇಶತೆಯನ್ನು ಪುರಾತತ್ವ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿದಲ್ಲಿ ಇದರ ಇತಿಹಾಸ ತಿಳಿಯಬಹುದೆಂದು ಸ್ಥಳೀಯ ಕ.ಸಾ,ಪ ಹೋಬಳಿ ಘಟಕದ ಮಾಜಿ ಅಧ್ಯಕ್ಷ ಅಮರೇಶ ಗಲಗಲಿ ಹೇಳಿದರು.

ಏನೆ ಆಗಲಿ ವಿಜಯನಗರದ ಹಂಪಿ ವಿಠ್ಠಲ ದೇವಸ್ಥಾನದ ನಾದ ಹೊರಹೊಮ್ಮುವ ಕಂಬಗಳಂತೆ ಇಲ್ಲಿಯ ಕಲ್ಲಿನಲ್ಲಿ ಕೂಡ ಗಂಟೆಯ ಶಬ್ದವು ಬಾರಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Share this Article
error: Content is protected !!