ಪತ್ರಕರ್ತ ಶರಣಪ್ಪ ಕುಂಬಾರ ಅವರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷರೂ ಪರಿಹಾರ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ತಾಲೂಕಿನ ಹನುಮನಾಳ ಗ್ರಾಮದ ಶರಣಪ್ಪ ಕುಂಬಾರ ರಾಜ್ಯಮಟ್ಟದ ದಿನಪತ್ರಿಕೆ ಹಾಗೂ ಚಾನಲ್ ಗಳಲ್ಲಿ ಕೆಲಸ ನಿರ್ವಹಿಸಿ ರಾಜ್ಯದಾದ್ಯಂತ ಜನರ ಪ್ರೀತಿಗೆ ಪಾತ್ರರಾಗಿದ್ದರು, ಇವರ ಅಕಾಲಿಕ ಮರಣದಿಂದಾಗಿ ಅವರ ಕುಟುಂಬಕ್ಕೆ ನೆರವು ನೀಡಲು ಕೊರಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ ಅವರ ಕುಟುಂಬಕ್ಕೆ ಪರಿಹಾರ ನಿಧಿ ಮಂಜೂರಾಗಿದ್ದು,

ಪರಿಹಾರ ಮಂಜೂರು ಮಾಡಲು ಶ್ರಮಿಸಿದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಹಾಲಿ ಶಾಸಕ ದೊಡ್ಡನಗೌಡ ಪಾಟೀಲ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪದಾಧಿಕಾರಿಗಳು ಮುಖ್ಯ ಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಉದಯ ವಾಹಿನಿಯು ಕೂಡ ಅಭಿನಂದನೆ ಸಲ್ಲಿಸಿದೆ.

Share this Article
error: Content is protected !!