Saturday , October 12 2024
Breaking News
Home / Breaking News / ತಾವರಗೇರಾ:- ಸಂಭ್ರಮದ ಹಾಲುಗಂಬ ಸ್ಫರ್ಧೆ..!

ತಾವರಗೇರಾ:- ಸಂಭ್ರಮದ ಹಾಲುಗಂಬ ಸ್ಫರ್ಧೆ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ವಿಜಯದಶಮಿ ಹಬ್ಬದ ಅಂಗವಾಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಹಾಲುಗಂಬ ಏರುವ ಸ್ಪರ್ಧೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಯಾದವ ಸಮಾಜದ ವತಿಯಿಂದ ನಡೆಯುವ ಸ್ಫರ್ಧೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು, ಮೊದಲಿಗೆ ಗದ್ದೇರಹಟ್ಟಿಯ ಗಿರಿಯಪ್ಪ ಕೊಂಡೆಪ್ಪ ಕುಶೆಕಾಳರ ಪ್ರಥಮ ಹಂತದಲ್ಲಿ ಗುರಿ ತಲುಪಿ ಕೇವಲ ಉತ್ತತ್ತಿಯನ್ನು ಮಾತ್ರ ಪಡೆದುಕೊಂಡಕ್ಕಾಗಿ ಮತ್ತೊಮ್ಮೆ ಸ್ಪರ್ಧೆಯನ್ನು ಮುಂದುವರೆಸಿ ಉಳಿದ ಕೊಬ್ಬರಿ ಹಾಗೂ ಉತ್ತತ್ತಿಯನ್ನು ಕೃಷ್ಣಗಿರಿ ಕಾಲೋನಿಯ ಹನುಮೇಶ ಭೀಮಪ್ಪ ಭಂಗಿ ಪಡೆಯುವ ಮೂಲಕ ಸ್ಫರ್ಧೆಯನ್ನು ಪೂರ್ಣ ಗೊಳಿಸಿದರು.

ನಂತರ ವೆಂಕಟೇಶ ಮೂರ್ತಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಮುಗಿದ ನಂತರ ಪರಸ್ಪರ ಬನ್ನಿ ಹಂಚಿಕೊಳ್ಳುವ ಕಾರ್ಯಕ್ರಮ ನಡೆಯಿತು .

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!