ಸಾವಿನಲ್ಲೂ ಒಂದಾದ, ಗಂಡ, ಹೆಂಡತಿ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ರಾತ್ರಿ ಗಂಡ ನಿಧನ ಹೊಂದಿದ ಬೆನ್ನಲ್ಲೇ ಬೆಳಗಿನ ಜಾವ ಹೆಂಡತಿ ಕೂಡ ಸಾವನ್ನಪ್ಪಿದ್ದು , ಸಾವಿನಲ್ಲು ಸಾರ್ಥಕತೆ ಮೆರೆದು ಗಂಡ ಹೆಂಡತಿಯ ಅಂತ್ಯಕ್ರಿಯೆಯು ಒಟ್ಟಿಗೆ ನಡೆಯುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಬುತ್ತಿಬಸವೇಶ್ವರ ನಗರದ ನಿವಾಸಿಗಳಾಗಿದ್ದ ಹಾಲುಮತ ಸಮಾಜದವರಾಗಿದ್ದು ನಿವೃತ್ತ ಮುಖ್ಯಗುರುಗಳಾದ ಹನುಮಂತಪ್ಪ ಮೇಟಿ (81), ಹಾಗೂ ಗೌರಮ್ಮ ಮೇಟಿ (65) ಸಾವಿನಲ್ಲೂ ಒಂದಾದ ಜೋಡಿಗಳಾಗಿದ್ಧಾರೆ ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು , ಮೃತರ ಅಂತ್ಯಕ್ರಿಯೆಯು ಮಂಗಳವಾರದಂದು ಹಿರೇಅರಳಹಳ್ಳಿ ಜಮೀನಿನಲ್ಲಿ ನಡೆಯುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

Share this Article
error: Content is protected !!