ತಾವರಗೇರಾ: ಶಾಂತಿಯುತ ಮೊಹರಂ ಆಚರಿಸಿ,- ಡಿವಾಯಎಸ್ ಪಿ ಆರ್ ಎಸ್ ಉಜ್ಜನಕೊಪ್ಪ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವ ಪಟ್ಟಣದ ಸರ್ವ ಜನಾಂಗದವರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಂತಿಯುತ ಹಾಗೂ ಸಡಗರ ದಿಂದ ಮೊಹರಂ ಹಬ್ಬವನ್ನು ಆಚರಿಸಬೇಕೆಂದು ಗಂಗಾವತಿ ಡಿವಾಯ್ ಎಸ್ ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು.

ಅವರು ಸ್ಥಳೀಯ ಠಾಣಾವರಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಪಿಐ ನಿಂಗಪ್ಪ ಎನ್ ಆರ್ ಮಾತನಾಡಿ ಶಾಮೀದ್ ಅಲಿ ದರ್ಗಾ ಹಾಗೂ ವಕ್ಫ್ ಬೋರ್ಡಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಯಾವುದೇ ಅಭ್ಯಂತರವಿಲ್ಲ ಸರ್ವ ಜನಾಂಗದವರ ವಿಶ್ವಾಸ ತೆಗೆದುಕೊಂಡು ಸಂಬಂಧಿಸಿದ ತಹಶೀಲ್ದಾರರ ಗಮನಕ್ಕೆ ತಂದು ಎಲ್ಲರೂ ಸೇರಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರಾದ ಮುರುಳಿಧರ್ ರಾವ್, ಜಿಲ್ಲಾ ವಕ್ಫ್ ಅಧಿಕಾರಿ ರೆಹಮತುಲ್ಲಾ, ಸ್ಥಳೀಯ ಠಾಣಾಧಿಕಾರಿ ಪುಂಡಪ್ಪ ಸೇರಿದಂತೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಹಿಂದು ಮುಸ್ಲಿಂ ಜನಾಂಗದ ಮುಖಂಡರು ಉಪಸ್ಥಿತರಿದ್ದರು.

Share this Article
error: Content is protected !!