ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕೊಪ್ಪಳ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 400 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಕೌಂಟರ್ ಗಳನ್ನು ತೆಗೆಯಲಾಗಿದ್ದು ಅದರಲ್ಲಿ 153 ಬಾಪೂಜಿ ಸೇವಾ ಕೇಂದ್ರ ಹಾಗೂ ಇನ್ನಿತರ 204 ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾರಿಗಳಾದ ರಾಹುಲ್ ರತ್ನಮ್ ಪಾಂಡೆ ಹೇಳಿದರು.
ಅವರು ಗುರುವಾರದಂದು ಮೆಣೇಧಾಳ ಗ್ರಾಮ ಪಂಚಾಯತಿ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿದರು.
ಅದೇ ರೀತಿ ಪಟ್ಟಣದಲ್ಲಿ ಎರಡು ಸೇವಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪಟ್ಟಣದ ಪಾತಪ್ಪನ ಕಟ್ಟಿ ಹತ್ತಿರ ಹಾಗೂ ನೆಮ್ಮದಿ ಸೇವಾ ಕೇಂದ್ರದಲ್ಲಿ ತೆರೆಯಲಾಗಿದ್ದು , ಸಾರ್ವಜನಿಕರು ಇದರ ಪ್ರಯೋಜನೆ ಪಡೆದುಕೊಳ್ಳಬೇಕೆಂದು ಪಪಂ ಮುಖ್ಯಾಧಿಕಾರಿ ನಬೀಸಾಬ ಖುದಾನ್ನವರ ತಿಳಿಸಿದ್ದಾರೆ..
ಸಹಾಯವಾಣಿ :-8147500500
ಈ ಗೃಹ ಲಕ್ಷ್ಮಿ ಯೋಜನೆ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಮೇಲಿನ ಸಂಖ್ಯೆಗೆ ಎಸ್ಎಂಎಸ್ ಮಾಡಿ.