ತಾವರಗೇರಾ:- ಶಾಮೀದ್ ಅಲಿ ದರ್ಗಾದ ಆಡಳಿತಾಧಿಕಾರಿಯಾಗಿ ಶಾಮಣ್ಣ ನಾರಿನಾಳ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ ಶಾಮೀದ್ ಅಲಿ ದರ್ಗಾದ ಆಡಳಿತಾಧಿಕಾರಿಗಳನ್ನಾಗಿ ಕುಷ್ಟಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಆದ ಶಾಮಣ್ಣ ಹುಲಗಪ್ಪ ನಾರಿನಾಳ ಇವರನ್ನು ನೇಮಿಸಿ ಕುಷ್ಟಗಿ ತಹಶಿಲ್ದಾರರು ಆದೇಶಿಸಿರುತ್ತಾರೆ.

ಪ್ರಸ್ತುತ ಕುಷ್ಟಗಿ ಯ ತಹಶೀಲ್ದಾರರ ನೇತೃತ್ವದಲ್ಲಿ ಶಾಮೀದ್ ಅಲಿ ದರ್ಗಾದ ಎಲ್ಲಾ ಕಾರ್ಯಗಳು ನಡೆಯುತ್ತಿದ್ದವು ಸದ್ಯ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬೆಂಗಳೂರು ಇವರ ಆದೇಶದಂತೆ ತಾವರಗೇರಾ ಪಟ್ಟಣದ ಶ್ರೀ ಹಜರತ ಸೈಯದ್ ಶಾಮೀದ್ ಅಲಿ ದರ್ಗಾದ ಎಲ್ಲಾ ಕಾರ್ಯಕ್ರಮಗಳ ಆಡಳಿತವನ್ನು ಶಾಮಣ್ಣ ನಾರಿನಾಳ ಇವರಿಗೆ ಹಸ್ತಾಂತರಿಸಿ ಉಲ್ಲೇಖ ಪತ್ರದೊಂದಿಗೆ ಲಗತ್ತಿಸಿ ಕಾನೂನು ರಿತ್ಯಾ ಅಗತ್ಯ ಕ್ರಮ ಕೈಗೊಳ್ಳುವುಂತೆ ಪತ್ರದಲ್ಲಿ ಕೋರಲಾಗಿದೆ ಎಂದು ಕುಷ್ಟಗಿ ತಹಶೀಲ್ದಾರ ಕಾರ್ಯಾಲಯದ ಮೂಲಕ ತಿಳಿದು ಬಂದಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಬೆಂಗಳೂರು, ಜಿಲ್ಲಾಧಿಕಾರಿಗಳು ಕೊಪ್ಪಳ, ಉಪವಿಭಾಗ ಅಧಿಕಾರಿಗಳು ಕೊಪ್ಪಳ, ಜಿಲ್ಲಾ ವಕ್ಫ ಅಧಿಕಾರಿಗಳು ಕೊಪ್ಪಳ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಪ್ರತಿ ಯನ್ನು ಸಲ್ಲಿಸಲಾಗಿದೆ.

Share this Article
error: Content is protected !!