ಬಂಗಾರ, ಬೈಕ್ ಕದ್ದ ಕಳ್ಳರು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ :- ಪಟ್ಟಣದ ಗಾಂಧಿ ನಗರದಲ್ಲಿ ಎರಡು ಮನೆಗಳಲ್ಲಿ ರಾತ್ರಿ ಕಳ್ಳತನವಾಗಿದ್ದು, ಬಂಗಾರ, ಬೆಳ್ಳಿ ಸೇರಿ ಒಂದು ಬೈಕ್ ಅನ್ನು ಕಳ್ಳರು ಕದ್ದೊಯ್ದಿರುವುದು ಶುಕ್ರವಾರ ಬೆಳಿಗ್ಗೆ ತಿಳಿದುಬಂದಿದೆ.

ಬಸವರಾಜ ಸಾಸ್ವಿಹಾಳ ಎಂಬುವರ ಮನೆ ಬೀಗ ಮುರಿದ ಕಳ್ಳರು 1 ತೊಲೆ ಬಂಗಾರ, 20 ತೊಲೆ ಬೆಳ್ಳಿ ಹಾಗೂ 90 ಸಾವಿರ ರೂಪಾಯಿ ನಗದು ಹಣ ದೋಚಿದ್ದಾರೆ.
ಬಸವರಾಜ ಸಾಸ್ವಿಹಾಳ ಅವರು ಗುರುವಾರ ರಾತ್ರಿ ತಮ್ಮ ತಂದೆಯನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಮನೆ ಬೀಗ ಹಾಕಿ ಹೋಗಿದ್ದರು.

ಅದೇರೀತಿ ಪಕ್ಕದಲ್ಲಿರುವ ಬಾಬು ತಂದೆ ನಾಗಪ್ಪ ರಾಯಚೂರು ಎಂಬುವರಿಗೆ ಸೇರಿದ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಟಿಜ್ಯೂರಿಯಲ್ಲಿನ ಕಾಗದ ಪತ್ರ, ಸೀರೆ, ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ 2 ತೊಲೆ ಬಂಗಾರ ದೋಚಿದ್ದಾರೆ.
ಬಾಬು ರಾಯಚೂರು ಎಂಬುವರು ಮನೆ ಬೀಗ ಹಾಕಿ ಕಾರ್ಯನಿಮಿತ್ತ ಪರ ಊರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡಿರುವ ಕಳ್ಳರು ಕೃತ್ಯ ಎಸಗಿದ್ದಾರೆ.
ಅಷ್ಟೇ ಅಲ್ಲದೆ ಮುರ್ತುಜಾ ಸಾಬ ಕಂಬಾರ ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಶೈನ್ ಬೈಕ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ.

ವಿಷಯ ತಿಳಿದ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆಯಿಂದ ಆತಂಕಕ್ಕೆ ಒಳಗಾಗಿರುವ ಗಾಂಧಿ ನಗರದ ನಿವಾಸಿಗಳು ರಾತ್ರಿ ವೇಳೆ ಪೊಲೀಸ್ ಕಾವಲು ಒದಗಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.

Share this Article
error: Content is protected !!