ತಾವರಗೇರಾ:- 5 ರೂ ಕುರಕುರೆ ಪ್ಯಾಕೆಟ್ ಜೊತೆಗೆ 500 ರೂ ನೋಟು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ :- ಐದು ರೂಪಾಯಿ ಬೆಲೆ ಬಾಳುವ ಕುರಕುರೆ ಪ್ಯಾಕೆಟ್ ನೊಂದಿಗೆ ಗರಿಗರಿಯ ಐದುನೂರ ರುಪಾಯಿ ಹಾಗೂ ಎರಡು ನೂರು ರೂಪಾಯಿಗಳು ನಿಮಗೆ ಬೇಕೆ ಹಾಗಿದ್ದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಪಾನ್ ಶಾಪ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಲಭ್ಯವಿದೆ, ಇಂಥದೊಂದು ಸುದ್ದಿ ವಿಚಿತ್ರವಾದರೂ ಸತ್ಯವಾಗಿದೆ. ಐದು ರೂಪಾಯಿ ಕುರುಕುರೆ ಪ್ಯಾಕೆಟ್ ನೊಂದಿಗೆ ಅಸಲಿ 500 ರೂ ಹಾಗೂ 200 ರೂ ಬೆಲೆಬಾಳುವ ನೋಟುಗಳು ಕುರುಕುರೆ ಪ್ಯಾಕೆಟ್ ನೊಂದಿಗೆ ಕಂಡುಬರುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು ಇದರಿಂದಾಗಿ ಆಸಕ್ತಿಯಿಂದ ಗ್ರಾಹಕರು ಕುರುಕುರೆ ಪ್ಯಾಕೆಟ್ ತೆಗೆದುಕೊಂಡಾಗ ನಿಜ ಬಣ್ಣ ಬಯಲಾಗಿದೆ.

ಅಸಲಿ ನೋಟುಗಳನ್ನು ಮೀರಿಸುತ್ತಿರುವ ನಕಲಿ ನೋಟುಗಳು ಕಂಡು ಬರುತ್ತಿವೆ, ಈ ಹಿಂದೆ ಮಕ್ಕಳಿಗಾಗಿ ದೊಡ್ಡ ದೊಡ್ಡ ಆಕಾರದ ರೂಪಾಯಿ ನೋಟುಗಳನ್ನು ಕುರ್ಕುರೆ ಪ್ಯಾಕೆಟ್ ನೊಂದಿಗೆ ಮಾರುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಆದರೆ ಈಗ ನಿಜವಾದ ನೋಟುಗಳಂತೆ ಕಾಣುತ್ತಿರುವ ಮತ್ತು ಹೋಲಿಕೆಯಲ್ಲಿ ಅಸಲಿ ನೋಟಗಳನ್ನು ಮೀರಿಸುತ್ತಿರುವ ನೋಟುಗಳು ಕುರ ಕುರೆ ಪಾಕೆಟ್ ನೊಂದಿಗೆ ಅಲ್ಲಲ್ಲಿ ಕಂಡು ಬರುತ್ತಿರುವುದು ಜನರ ಗೊಂದಲಕ್ಕೆ ಕಾರಣವಾಗಿದೆ ಇದರಿಂದಾಗಿ ಗ್ರಾಮೀಣ ಭಾಗದ ಜನರು ಮೋಸ ಹೋಗುವ ಸಂಭವಿರುವುದರಿಂದ ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

 

Share this Article
error: Content is protected !!