ಶಿಕ್ಷಣ ಪ್ರೇಮಿ ಲಕ್ಷ್ಮಣಪ್ಪ ಶಿರವಾರ ಇನ್ನಿಲ್ಲ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ ಹಿರಿಯ ನಾಗರಿಕರು ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಮೊದಲ ಧ್ವಜಾರೋಹಣ ದಲ್ಲಿ ಪಾಲ್ಗೊಂಡ ಹಿರಿಮೆಗೆ ಪಾತ್ರರಾಗಿದ್ದ ಲಕ್ಷ್ಮಣಪ್ಪ ತಿಪ್ಪಣ್ಣ ಶಿರವಾರ (87) ಬುಧವಾರದಂದು ನಿಧನರಾಗಿದ್ದಾರೆ.

ಸ್ಥಳೀಯ ಜನತಾ ಶೈಕ್ಷಣಿಕ ಸಂಘವು 1984-85 ರಿಂದ ಪ್ರಾರಂಭವಾಗಿ ಇಂದಿನವರೆಗೂ 39 ವರ್ಷಗಳ ಕಾಲ ಆ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹಿರಿಮೆಯು ಇವರದು. ಜೊತೆಗೆ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಹಾಗೂ ಸ್ಥಳೀಯ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷರಾಗಿದ್ದರು.
ಮೃತರು 3 ಜನ ಗಂಡು ಮಕ್ಕಳು, 5 ಜನ ಹೆಣ್ಣುಮಕ್ಕಳು ಸೇರಿದಂತೆ ಅಪಾರ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕುಟುಂಬ ಸದಸ್ಯರು ಸೇರಿದಂತೆ ಸ್ಥಳೀಯ ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ವರ್ಗ ಸೇರಿದಂತೆ ಪಟ್ಟಣದ ನಾಗರಿಕರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಅಂತ್ಯಕ್ರಿಯೆಯು ಗುರುವಾರದಂದು ನಡೆಯಲಿದೆ.

Share this Article
error: Content is protected !!