ರಸ್ತೆ ಅಪಘಾತ ಬಿಲ್ ಕಲೆಕ್ಟರ್ ಸಾವು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ :– ತಾಲೂಕಿನ ಬೆನಕನಾಳ ಕುಂಬಳಾವತಿ ಮಾರ್ಗದ ರಸ್ತೆಯಲ್ಲಿ ಎರಡು ಬೈಕ್’ಗಳ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಗ್ರಾಮ ಪಂಚಾಯಿತಿ ನೌಕರ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಬೆನಕನಾಳ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಸೇವೆಯಲ್ಲಿದ್ದ ಸುಮಾರು 45 ವಯಸ್ಸಿನ ಆನಂದಪ್ಪ ತಂದಿ ಭೀಮನಗೌಡ ಮಾಲಿಪಾಟೀಲ ಎಂಬುವರು ಮೃತ ದುರ್ದೈವಿ.

ಬೆನಕನಾಳ ಗ್ರಾಮದಿಂದ ಸ್ವಗ್ರಾಮ ಕುಬಳಾವತಿ ಕಡೆಗೆ ಬೈಕ್ ಚಲಾಯಿಸಿಕೊಂಡು ಹೊರಟಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಮತ್ತೊಂದು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ, ತಲೆಗೆ ಬಲವಾದ ಪೆಟ್ಟುತಿಂದ ಆನಂದಪ್ಪರನ್ನು ಹೆಚ್ಚಿನ
ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದ ಕುರಿತು ಹನುಮಸಾಗರ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.
ಮೃತರಿಗೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ನೌಕರರು ಕಂಬನಿ ಮಿಡಿದಿದ್ದಾರೆ.

Share this Article
error: Content is protected !!