ತಾವರಗೇರಾ: ಪೊಲೀಸ್ ಠಾಣೆಯಲ್ಲಿ ಪರಿಸರ ದಿನಾಚರಣೆ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಪಿಎಸ್ ಐ ತಿಮ್ಮಣ್ಣ ನಾಯಕ ಸಸಿ ನಡುವ ಮೂಲಕ ಪರಿಸರ ದಿನಾಚರಣೆ ಯನ್ನು ಆಚರಿಸಿದರು.

ನಂತರ ಮಾತನಾಡಿ ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ವಾಗಿದ್ದು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ , ಪರಿಸರ ಬೆಳಸಿ ನಾಡು ಉಳಿಸಬೇಕಾಗಿದೆ ಎಂದರು.

ಈ ಸಂದರ್ಭಗಳಲ್ಲಿ ಠಾಣಾ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಮುದಿಯಪ್ಪ, ವಿರೇಶ, ಆನಂದ, ಮಹ್ಮದ್ ರಫಿ, ಕರಿಯಪ್ಪ, ಹನುಮಗೌಡ, ಯಮನೂರ, ಹನುಮಂತ ಉಪಸ್ಥಿತರಿದ್ದರು.

Share this Article
error: Content is protected !!