ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತ ತಾವರಗೇರಿಯ ಉರುಸ್..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯ ಹಿಂದು ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಶಾಮೀದ್ ಅಲಿ ಹಾಗೂ ಖಾಜಾ ಬಂದೇನವಾಜ ದರ್ಗಾಗಳ ಉರುಸ್ ನಾಳೆಯಿಂದ ಪ್ರಾರಂಭವಾಗಲಿದೆ.

ದಿನಾಂಕ 05 ಸೋಮವಾರದಂದು ಗಂಧ, 06 ಮಂಗಳವಾರದಂದು ಉರುಸ್, 07 ಬುಧವಾರದಂದು ಜಿಯಾರತ್ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ, ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಿಂದಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು , ಸ್ಥಳೀಯ ಪಟ್ಟಣ ಪಂಚಾಯತ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸ್ಥಳೀಯವಾಗಿ ಭಕ್ತಾದಿಗಳಿಗೆ ತೊಂದರೆ ಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಉರುಸ್ ನ ದಿನ ಮಂಗಳವಾರದಂದು ರಾತ್ರಿ ಖ್ಯಾತ ಕವಾಲಿ ತಂಡದವರಿಂದ ಕವಾಲಿ ಪ್ರದರ್ಶನ ಏರ್ಪಡಿಸಲಾಗಿದೆ ಹಾಗೂ ಉರುಸ್ ಪ್ರಯುಕ್ತ ವಾಲಿಬಾಲ್ ಪಂದ್ಯಾಟಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Share this Article
error: Content is protected !!