ಅನೈತಿಕ ಸಂಬಂಧ ಇಬ್ಬರು ಆತ್ಮಹತ್ಯೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ.

ಮಾಲಗಿತ್ತಿ ಗ್ರಾಮದ ಚಾಲಕ ಫೀರಸಾಬ (35) ಮತ್ತು ಅದೇ ಗ್ರಾಮದ ಶಾರವ್ವ (30) ಎಂಬುವವರು ಮೃತ ದುರ್ದೈವಿ ಗಳಾಗಿದ್ದಾರೆ , ಫೀರಸಾಬ ಹಾಗೂ ಶಾರವ್ವ ರ ಮಧ್ಯೆ ಅನೈತಿಕ ಸಂಬಂಧದ ಬಗ್ಗೆ ತಿಳಿದ ಫೀರಸಾಬ ನ ಹೆಂಡತಿ ಶಾರವ್ವ ಳೊಂದಿಗೆ ಜಗಳಕ್ಕೆ ಇಳಿದ ಬಗ್ಗೆ ತಿಳಿದು ಬಂದಿದೆ ಈ ಬಗ್ಗೆ ಗ್ರಾಮದ ಹಿರಿಯರು ಸಮಸ್ಯೆ ಪರಿಹರಿಸುವದಾಗಿ ಬುದ್ದಿವಾದ ಹೇಳಿ ಕಲಾಹ ತಿಳಿಗೊಳಿಸಿದ್ದಾರೆ ಆದರೆ ಘಟನಾ ನಂತರ ರಾತ್ರಿ ವೇಳೆ ಫೀರಸಾಬ ಹಾಗೂ ಶಾರವ್ವ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Article
error: Content is protected !!