ಕುಷ್ಟಗಿ: ಭೀಕರ ರಸ್ತೆ ಅಪಘಾತ 6 ಜನರ ಸಾವು..!

N Shameed
0 Min Read

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಲಾರಿ ಹಾಗೂ ಕಾರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು 6 ಜನ ಮೃತ ಪಟ್ಟ ದಾರುಣ ಘಟನೆ ಸಮೀಪದ ಕಲಕೇರಿ ಫಾರ್ಮ್ ಹತ್ತಿರ ಸಂಭವಿಸಿದೆ.

ತಮಿಳುನಾಡಿನಿಂದ ಗುಜರಾತ್ ಗೆ ತೆರಳುತ್ತಿದ್ದ ಲಾರಿ ಹಾಗೂ ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ, ಕಾರ್ ನಲ್ಲಿದ್ದ ರಾಜಪ್ಪ ಬನಗೋಡಿ, ರಾಘವೇಂದ್ರ ಕಾಂಬಳೆ, ಅಕ್ಷಯ ಶಿವಶರಣ, ಜಯಶ್ರೀ ಕಾಂಬಳೆ, ಸೇರಿದಂತೆ ಮಕ್ಕಳಾದ ರಾಕಿ ಮತ್ತು ರಶ್ಮೀಕಾ ಎಂಬುವವರು ದಾರುಣವಾಗಿ ಮೃತ ಪಟ್ಟ ಘಟನೆ ನಡೆದಿದ್ದು, ಕುಷ್ಟಗಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this Article
error: Content is protected !!