ತಾವರಗೇರಾ:- ಮತ ಚಲಾಯಿಸಿದ ಮದು ಮಗಳು..!

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಗುರುವಾರದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಮದು ಮಗಳು ಮತದಾನ ಮಾಡುವ ಮೂಲಕ ಮತದಾನದ ಮಹತ್ವವನ್ನು ತಿಳಿಸಿಕೊಟ್ಟಿದ್ದು, ಇತರೆ ಮತದಾರರಿಗೆ ಮಾದರಿಯಾಗಿತ್ತು.

ಪಟ್ಟಣದ ಉಷಾರಾಣಿ ಸುರೇಶ ಐಲಿ ನಾಳೆ ತಮ್ಮ ವಿವಾಹ ವಿದ್ದರು ಕೂಡ, ನನ್ನ ಮತ ಹಾಕುವ ಹಕ್ಕನ್ನು ಬಿಟ್ಟುಕೊಡದೇ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು,

ಅದರಂತೆ ಪಟ್ಟಣದ 15 ಮತಗಟ್ಟೆ ಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಶಾಂತಿಯುತ ಮತದಾನ ನಡೆದಿದ್ದು ಕಂಡು ಬಂತು , ಅದರಲ್ಲೂ ವಿಶೇಷವಾಗಿ ಪಟ್ಟಣದ ಸಖಿ ಮತದಾನ ಕೇಂದ್ರವನ್ನು ಬಣ್ಣ ಹಾಗೂ ಅಲಂಕಾರ ಮಾಡಿದ್ದು, ವಿಷೇಶವಾಗಿ ಕಂಡು ಬಂತು.

ಎಲ್ಲಾ ಮತಗಟ್ಟೆಗಳಲ್ಲು, ಅಗತ್ಯ ಸೌಲಭ್ಯ ಗಳಾದ ಫೆಂಡಾಲ್, ಕುಡಿಯುವ ನೀರು, ಶೌಚಾಲಯ, ವ್ಯವಸ್ಥೆಯನ್ನು ಏರ್ಪಡಿಸಿದ್ದು ಕಂಡು ಬಂತು, 

ಎಲ್ಲಾ ಮತಗಟ್ಟೆಗಳ ಸುತ್ತಲು ಬಿಗಿ ಪೊಲೀಸ್  ಕಾವಲು ನಿರ್ಮಿಸಿತ್ತು.

Share this Article
error: Content is protected !!