ತಾವರಗೇರಾ: ಸಿಡಿಲಿಗೆ ಕುರಿಗಳು ಬಲಿ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಮಂಗಳವಾರ ಸಂಜೆ ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಎರಡು ಕುರಿಗಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ.

ಸಮೀಪದ ರಾಮಜಿನಾಯ್ಕ್ ತಾಂಡಾದ ಹೊರ ಹೊಲಯದ ಜಮೀನಿನಲ್ಲಿ ಮೇಯಲು ಹೋಗಿದ್ದ ಎರಡು ಕುರಿಗಳು ಮೃತ ಪಟ್ಟಿದ್ದು ಇವು ರಾಮಜಿ ನಾಯ್ಕ್ ತಾಂಡಾದ ಸೀನಪ್ಪ ಹನುಮಪ್ಪ ಚೌಹಾಣ ಎಂಬುವವರಿಗೆ ಸೇರಿವೆ.


ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!