ತಾವರಗೇರಾ:- ಪೆಂಟರ್ ನ ಕಷ್ಟಕ್ಕೆ, ಕೈಲಾದಷ್ಟು ಸಹಾಯ ಮಾಡಿ..!

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ ಪೆಂಟರ್ ಒಬ್ಬರ ಎರಡು ಮೂತ್ರಪಿಂಡ ಗಳು ನಿಷ್ಕ್ರಿಯ ಗೊಂಡಿದ್ದು, ಆರ್ಥಿಕವಾಗಿ ಬಡವನಾಗಿದ್ದು ವೈದ್ಯಕೀಯ ಚಿಕಿತ್ಸೆ ಗಾಗಿ ನೆರವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಉದ್ಯೋಗ ದಿಂದ ಪೆಂಟರ್ ಆದ ಖಾಜಾವಲಿ ಶಾಮೀದ್ ಸಾಬ ಎಲಿಗಾರ ಎನ್ನುವ ವ್ಯಕ್ತಿಯು ಕಳೆದ ಒಂದು ವರ್ಷದಿಂದ ವೈದ್ಯರ ಸಲಹೆ ಮೆರೆಗೆ ವಾರದಲ್ಲಿ 3 ಬಾರಿ ಡಯಾಲಿಸಸ್ ಮಾಡಬೇಕಾಗಿದ್ದು, ಕುಟುಂಬ ನಿರ್ವಹಣೆ ತುಂಬಾ ತೊಂದರೆಯಾಗಿದ್ದು , ಮನೇಲಿ ಹೆಂಡತಿ ಹಾಗೂ 3 ವರ್ಷದ ಒಬ್ಬ ಗಂಡು ಮಗನಿದ್ದಾನೆ ಕಾರಣ ಸಾರ್ವಜನಿಕರು ಅನಾರೋಗ್ಯದಿಂದ ಬಳಲುತ್ತಿರವ ಖಾಜಾವಲಿ ಶಾಮೀದ್ ಸಾಬ ಎಲಿಗಾರ ಇವರ ಸಹಾಯಕ್ಕೆ ಬರಬೇಕೆಂಬುದು ಉದಯವಾಹಿನಿಯ ಕಳಕಳಿಯಾಗಿದೆ.

ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಕೋಟಿ ಗಟ್ಟಲೇ ಖರ್ಚು ಮಾಡುವ ರಾಜಕೀಯ ಮುಖಂಡರು ಈ ಒಂದು ಬಡ ಕುಟುಂಬದ ನೆರವಿಗೆ ಬಂದಲ್ಲಿ ಆ ಒಂದು ಕುಟುಂಬಕ್ಕೆ ಆಸರೆಯಾಗುತ್ತೆಂಬುದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.
ಒಟ್ಟಿನಲ್ಲಿ ಬೇರೆಯವರ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಬಣ್ಣ ಬಡೆಯುವ ಪೆಂಟರ್ ಒಬ್ಬನ ಬದುಕಿನಲ್ಲಿ ವಿಧಿಯಾಟ ನಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಈ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನಿಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯ ವಾಗಿದೆ,

ಸಹಾಯ ಮಾಡಲು ಇಚ್ಚಿಸುವವರು ಮೇಲೆ ಹಾಕಿರುವ  ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.

Share this Article
error: Content is protected !!