ಆಮ್ ಆದ್ಮಿ ಹಾಗು ಬಿಎಸ್ ಪಿ ಅಭ್ಯರ್ಥಿಗಳ ಪ್ರಚಾರ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ಅಬ್ಬರದ ಪ್ರಚಾರದ ಜೊತೆಗೆ ಬಿಎಸ್ ಪಿ ಹಾಗೂ ಆಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಕೂಡ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ, ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಕನಕಪ್ಪ ಮಳಗಾವಿ ಪಟ್ಟಣದಲ್ಲಿಂದು ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು.

ಇದೇ ಸಂದರ್ಭದಲ್ಲಿ ಆಮ್ ಆದ್ಮಿಯ ಕಾರ್ಯಕರ್ತ ಯಮನೂರಪ್ಪ ಬಿಳೇಗುಡ್ಡ ಅಭ್ಯರ್ಥಿಗೆ ಚುನಾವಣೆ ಖರ್ಚಿಗಾಗಿ 21 ಸಾವಿರ ರೂಗಳನ್ನು ದೇಣಿಗೆ ನೀಡಿ ಅಭ್ಯರ್ಥಿ ಗೆಲುವಿಗಾಗಿ ಮತದಾರರು ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಅಲಿ ಆದಿಲ್, ದೇವಣ್ಣ ಹುನಗುಂದ ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

 


ಬಿಎಸ್ ಪಿ ಅಭ್ಯರ್ಥಿ ಮತಯಾಚನೆ:– ಬಿಎಸ್ ಪಿ ಅಭ್ಯರ್ಥಿ ಶಿವಪುತ್ರಪ್ಪ ಗುಮಗೇರಿ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡು ಈ ಬಾರಿ ನನ್ನನ್ನು ಆಯ್ಜೆ ಮಾಡಿ ಎಂದು ಮತದಾರ ರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share this Article
error: Content is protected !!