ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರಿದ ಬಳೂಟಗಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಬಿಜೆಪಿ ನಾಯಕರ ವರ್ತನೆಗೆ ಬೆಸತ್ತು ಸ್ಥಳೀಯ ಬಿಜೆಪಿ ಮುಖಂಡ ಮಲ್ಲಪ್ಪ ಬಳೂಟಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

 

ಬಿಜೆಪಿಯ ಕಟ್ಟ ಬೆಂಬಲಿಗರಾಗಿದ್ದ ಮಲ್ಲಪ್ಪ ಬಳೂಟಗಿ ಇತ್ತಿಚಿಗೆ ಪಕ್ಷದಲ್ಲಿ ನನ್ನನ್ನು ಕಡೆಗಣಿಸಿದ್ದು ನನಗೆ ಬೇಸರ ಮೂಡಲು ಕಾರಣವಾಗಿದೆ ಹಾಗಾಗಿ ಬಿಜೆಪಿ ಪಕ್ಷ ತೊರೆದು ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಸ್ಥಳೀಯ ಉದ್ಯಮಿ ಅಯ್ಯನಗೌಡ ಮಾಲಿಪಾಟೀಲ ಹಾಗೂ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆನೆ ಎಂದು ತಿಳಿಸಿದರು.

ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ, ಉದ್ಯಮಿ ಅಯ್ಯನಗೌಡ ಮಾಲಿಪಾಟೀಲ್, ಮುಖಂಡರಾದ ಡಾ.ಶಾಮೀದ್ ದೋಟಿಹಾಳ, ರುದ್ರಗೌಡ ಪಾಟೀಲ್, ನಾರಾಯಣ ಗೌಡ ಮೆದಿಕೇರಿ, ಅಮರೇಶ ಗಾಂಜಿ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share this Article
error: Content is protected !!