ಅಭಿವೃದ್ಧಿ ನೋಡಿ ಮತ ನೀಡಿ,, ಬಯ್ಯಾಪೂರ..!

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಕ್ಷೇತ್ರದ ಮತದಾರರು ಅಭಿವೃದ್ಧಿಯ ಕೆಲಸಗಳನ್ನು ಗುರುತಿಸಿ ನನಗೆ ಮತ ನೀಡಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಅವರು ಗುರುವಾರದಂದು ಕ್ಷೇತ್ರದ ಗೋತಗಿ ಗ್ರಾಮದಲ್ಲಿ ನಡೆದ ಮತಯಾಚನೆಯಲ್ಲಿ ಮಾತನಾಡಿದರು, ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದು ಎಲ್ಲರ ಗಮನಕ್ಕೆ ಬಂದಿದ್ದು ಕ್ಷೇತ್ರದಾದ್ಯಂತ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಇತಿಹಾಸ ನಿರ್ಮಿಸುತ್ತೇನೆ ಎಂದು ಶಾಸಕ ಬಯ್ಯಾಪುರ ಹೇಳಿದರು .

ತಾಲೂಕಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕೆಲಸಗಳು ಆಗಿದ್ದು ಮುಂದಿನ ದಿನಗಳಲ್ಲಿ ಕೂಡ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ಹೇಳಿದರು.

 

Share this Article
error: Content is protected !!