ತಾವರಗೇರಾ:- ಬಿಜೆಪಿಯಿಂದ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ‌..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ :– ಪಟ್ಟಣದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರಕ್ಕೆ, ಬಿಜೆಪಿ ಕೂಡ ಅಪಾರ ಪ್ರಮಾಣದ ಜನಸಂಖ್ಯೆಯೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದು ಭರ್ಜರಿ ಪ್ರಚಾರಕ್ಕೆ ನಾಂದಿಯಾಯಿತು, ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮದ್ಯೆ ತೀವ್ರ ಪೈಪೋಟಿ ನಡೆಯುವುದು ಸತ್ಯ, ಪ್ರಚಾರದಲ್ಲಿ ಕೂಡ ಎರಡು ಪಕ್ಷಗಳು ಜನ ಸೇರಿಸಿ ಚುನಾವಣಾ ಕಣ ರಂಗೆರುವಂತೆ ಮಾಡಿವೆ.

ಮೊದಲಿಗೆ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮುಖಂಡ ರಾದ ವೀರಭದ್ರಪ್ಪ ನಾಲತವಾಡ, ಸಾಗರ್ ಬೇರಿ ಚಾಲನೆ ನೀಡಿ ಮಾತನಾಡಿ, ಈ ಬಾರಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅತ್ಯಧಿಕ ಮತದ ಅಂತರದಿಂದ ಮತ್ತೊಮ್ಮೆ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರ ಪತ್ನಿ ಲಕ್ಷ್ಮಿದೇವಿ ಶೈಲಜಾ ಬಾಗಲಿ, ಲಲಿತ ಮ್ಯಾಗಳಮನಿ ಸೇರಿದಂತೆ ಮುಖಂಡರಾದ ಬಸನಗೌಡ ಓಲಿ ಶಿವರಾಜ್ ಗೌಡ ಪೊಲೀಸ್ ಪಾಟೀಲ್, ಮಂಜುನಾಥ್ ಜುಲುಕುಂಟಿ, ಅರುಣ್ ನಾಲತವಾಡ, ರಮೇಶ ಗಿರಣಿ, ಮರಿಯಪ್ಪ ಬಿಸ್ತಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this Article
error: Content is protected !!