ಪತಿ ದೊಡ್ಡನಗೌಡ್ ಪಾಟೀಲ್ ಪರ ಮತ ಕೇಳಿದ ಪತ್ನಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಪತ್ನಿ ಲಕ್ಷ್ಮಿ ದೇವಿ ಪಾಟೀಲ್ ಅವರು ಪಟ್ಟಣದಲ್ಲಿ ಪತಿ ಪರವಾಗಿ ಮತ ಕೇಳಲು ತೆರಳಿದ ಸಂದರ್ಭದಲ್ಲಿ ಮಹ್ಮದ್ ಅಲಿ ನಾಯಕ ಅವರ ಕುಟುಂಬಕ್ಕೆ ತೆರಳಿ ಮತ ಕೇಳುವ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರೊಂದಿಗೆ ಬೆರತು ಮನೆಯಲ್ಲಿ ಸ್ವ ಕುಟುಂಬದ ಸದಸ್ಯರಂತೆ ಊಟ ಮಾಡುತ್ತಿರುವುದು ಜನರ ಮೆಚ್ಚುಗೆ ಗೆ ಪಾತ್ರ ವಾಯಿತು.

ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಂಚರಿಸಿ, ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತ ಪತಿ ದೊಡ್ಡನಗೌಡರ ಗೆ ಮತ ನೀಡಿ , ಗೆಲ್ಲಿಸಿ ತರಬೇಕೆಂದು ಎಲ್ಲೆಡೆ ಕಂಡು ಬಂತು.

ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಶೈಲಜಾ ಬಾಗಲಿ, ಲಲಿತಾ ಮ್ಯಾಗಳಮನಿ ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

Share this Article
error: Content is protected !!