ಕುಷ್ಟಗಿಗೆ ಚಿತ್ರನಟಿ ಉಮಾಶ್ರೀ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಚಲನಚಿತ್ರ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರು ಶನಿವಾರದಂದು ಕುಷ್ಟಗಿ ಗೆ ಆಗಮಿಸಲಿದ್ದಾರೆಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ಚಲನಚಿತ್ರ ರಂಗದಲ್ಲಿ ತಮ್ಮದೇ ನಟನೆ ಮೂಲಕ ಹೆಸರು ಗಳಿಸಿ ನಂತರ ರಾಜಕೀಯ ಕ್ಕೆ ಪ್ರವೇಶ ಮಾಡಿ ತೇರದಾಳ ಕ್ಷೇತ್ರದಿಂದ ವಿಧಾನಸಭೆ ಗೆ ಆಯ್ಕೆ ಆಗುವ ಮೂಲಕ ಸಚಿವೆ ಯಾಗಿಯೂ ಕೆಲಸ ನಿರ್ವಹಿಸಿದ್ದರು, ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ಪರವಾಗಿ ತಾಲೂಕಿನ ಹಿರೇಮನ್ನಾಪುರ ಹಾಗೂ ಹನುಮಸಾಗರ ಭಾಗಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆಂದು ತಿಳಿದು ಬಂದಿದೆ.

Share this Article
error: Content is protected !!