ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಬಸವ ಜಯಂತಿ ಅಂಗವಾಗಿ ಪಟ್ಟಣದ ಬಸವ ಸಮಿತಿ ವತಿಯಿಂದ ಇಲ್ಲಿಯ ಕರಿ ವೀರಣ್ಣ ದೇವಸ್ಥಾನದಲ್ಲಿ ಬಸವೇಶ್ವರ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು.
Video Player
00:00
00:00
ನಂತರ ಭಾವಚಿತ್ರದ ಮೆರವಣಿಗೆ ಜೊತೆಗೆ ಎತ್ತುಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಶೇಖರಗೌಡ ಪೊಲೀಸ್ ಪಾಟೀಲ್ ಮೆರವಣಿಗೆಗೆ ಚಾಲನೆ ನೀಡಿದರು. ಸಮಿತಿ ಸದಸ್ಯರಾದ ಕರಡೆಪ್ಪ ನಾಲತವಾಡ, ಆದಪ್ಪ ನಾಲತವಾಡ, ಮಲ್ಲಪ್ಪ ಜುಮಲಾಪೂರ, ಸಂಗಪ್ಪ ಕೋರಿ, ಅಮರೇಶ ಗಲಗಲಿ, ದೊಡ್ಡಪ್ಪ ಗುಬ್ಬಿ, ಲಿಂಗನಗೌಡ ಪಾಟೀಲ್, ಪಪಂ ಸದಸ್ಯ ವೀರನಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.