ದೊಡ್ಡನಗೌಡ ಪಾಟೀಲ್ ಗೆ ಕುರಿ ಮರಿಗಳನ್ನು ನೀಡಿದ ಗ್ರಾಪಂ ಸದಸ್ಯ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಭೀಮಣ್ಣ ಬೇವಿನಾಳ, ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ದೊಡ್ಡನಗೌಡ ಪಾಟೀಲ್ ಅವರಿಗೆ ಕುಟುಂಬ ಸಮೇತ ಎರಡು ಕುರಿಮರಿಗಳನ್ನು ಕಾಣಿಕೆಯಾಗಿ ನೀಡಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು.

ತಾವರಗೇರಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಬಿಜೆಪಿ ಸರ್ಕಾರದ ಸಾಧನೆ ಗುರುತಿಸಿ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ದೊಡ್ಡನಗೌಡ ಪಾಟೀಲ್ ಮತದಾರರಿಗೆ ಮನವಿ‌ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಶೇಖರಗೌಡ ಪೊಲೀಸ್ ಪಾಟೀಲ್, ಕೆ ಮಹೇಶ, ವೀರಭದ್ರಪ್ಪ ನಾಲತವಾಡ, ಅಶೋಕ ಬಳೂಟಗಿ, ಸಾಗರ ಬೇರಿ, ಮಂಜುನಾಥ ಜೂಲಕುಂಟಿ, ಮೆಣೇದಾಳ ಗ್ರಾಪಂ ಅಧ್ಯಕ್ಷ ಬಾಷು ಸಾಬ, ನಾಗರಜ ನಂದಾಪುರ, ರಮೇಶ ಪುರ, ಶಿವರಾಜ ಗೌಡ ಪಾಟೀಲ್, ನಾರಾಯಣ್ ಸಿಂಗ್ ಆನೇರಿ, ಅರುಣ್ ನಾಲತವಾಡ, ಉಮೇಶ ನಾಯಕ, ಆಲಂಬಾಷಾ ಮೆಣೇಧಾಳ, ಶಾಂತಪ್ಪ ಮೆಣೇದಾಳ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Share this Article
error: Content is protected !!