ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ತಾವರಗೇರಾ ಹಲವು ದಶಕಗಳಿಂದ ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ತಳ ಸಮುದಾಯ ನಡೆಸಿದ್ದ ಹೋರಾಟಕ್ಕೆ ರಾಜ್ಯ ಸರ್ಕಾರವು ಇಂದು ನಡೆದ ಸಚಿವ ಸಂಪಟ ಸಭೆಯಲ್ಲಿ ಒಳ ಮೀಸಲಾತಿ ಯನ್ನು ಘೋಷಿಸಿದ್ದಕ್ಕಾಗಿ ಸ್ಥಳೀಯ ಮುಖಂಡರು ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.
Video Player
00:00
00:00
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮುಖಂಡರಾದ ಸಾಗರ ಬೇರಿ, ನಾಗರಾಜ ನಂದಾಪುರ, ಮರಿಯಪ್ಪ ಬಿಸ್ತಿ, ಸಂಜೀವ ಚಲುವಾದಿ, ಅಮರೇಶ ಚಲುವಾದಿ, ಗೌತಮ ಭಂಡಾರಿ ಸೇರಿದಂತೆ ಅವರ ನೇತೃತ್ವದಲ್ಲಿ ಇತರ ಮುಖಂಡರು ಸೇರಿ ಸ್ಥಳೀಯ ಅಂಬೇಡ್ಕರ್ ರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮತ್ತು ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.