ತಾವರಗೇರಾ:- ಬಳೂಟಗಿ ಅವರು ಪಕ್ಷ ಬಿಡುವ ತಿರ್ಮಾನ ಕೈಗೊಳ್ಳಬಾರದಿತ್ತು,- ಬಯ್ಯಾಪೂರ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ವಿರೋಧ ಪಕ್ಷದಲ್ಲಿ ಇದ್ದರೂ ಕೂಡ ಆಡಳಿತದಲ್ಲಿರುವ ಸಚಿವರು ನನಗೆ ಆಪ್ತರಾಗಿರುವದರಿಂದಾಗಿ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಲಾಗಿದೆ , ಇನ್ನೂ ಅಭಿವೃದ್ಧಿ ಕೆಲಸಗಳು ಬಾಕಿಯಿವೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.

ಅವರು ಮಂಗಳವಾರದಂದು ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ
ಗೋಷ್ಠಿಯಲ್ಲಿ ಮಾತನಾಡಿದರು.

ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೆವೇಂದ್ರಪ್ಪ ಬಳೂಟಗಿ ಪಕ್ಷ ಬಿಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು , ಪಕ್ಷ ಬಿಡುವ ಬಗ್ಗೆ ಈ ಮುಂಚೆ ನನಗೆ ತಿಳಿಸಿದ್ದರು, ಆದರೆ ಬೇರೆ ಪಕ್ಷಕ್ಕೆ ಸೇರುತ್ತಾರೆ ಎಂಬುದು ನನಗೆ ತಿಳಿದು ಬಂದಿಲ್ಲ ಅವರನ್ನು ಮನವೊಲಿಸಲು ನಾನು ಹೋದಾಗ ಅವರು ನನಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಸಹೋದರ ಅಶೋಕ ಬಳೂಟಗಿ ಅವರು ಬಿಜೆಪಿ ಸೇರಿದ್ದರಿಂದಾಗಿ ಈ‌ ನಿರ್ಧಾರ ಕೈಗೊಂಡಿರಬಹುದು ಈ ಬಗ್ಗೆ ಹಿರಿಯರು ತೀರ್ಮಾನಿಸಿ ಕ್ರಮ ಕೈಗೊಳ್ಳಲ್ಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಸನಗೌಡ ಮಾಲಿ ಪಾಟೀಲ, ಡಾ.ಶಾಮೀದ್ ದೋಟಿಹಾಳ, ಚಂದ್ರಶೇಖರ ನಾಲತವಾಡ, ನಾರಾಯಣ ಗೌಡ ಮೆದಿಕೇರಿ, ದುರುಗೇಶ ನಾರಿನಾಳ, ವಿರೇಶ ತಾಳಿಕೋಟಿ, ವಿಕ್ರಮ್ ರಾಯ್ಕರ್, ಅಮರೇಶ ಗಾಂಜಿ, ರುದ್ರಗೌಡ ಕುಲಕರ್ಣಿ, ವೀರನಗೌಡ ಪಾಟೀಲ,ಲಿಂಗರಾಜ ಹಂಚಿನಾಳ, ಅಮರೇಶ ಕುಂಬಾರ, ಅಂಬಣ್ಣ ಸರನಾಡಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this Article
error: Content is protected !!