ತಾವರಗೇರಾ:- ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಶೈಕ್ಷಣಿಕ ತರಬೇತಿ ಆರಂಭ ,,- ಸತೀಶ್ ಜಾರಕಿಹೊಳಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಶೈಕ್ಷಣಿಕ ಮೂಲಭೂತ ಸೌಕರ್ಯಗಳನ್ನು ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಜಾರಕಿಹೊಳಿ ಫೌಂಡೇಶನ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಪಟ್ಟಣದ ಎಸ್ ಎಮ್ ವಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರದಂದು ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ, ಶಾಲೆಗೆಳಿಗೆ ಉಚಿತ ಡೆಸ್ಕ್ ( ಟೇಬಲ್ ) ಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂದಿನ ಏಪ್ರಿಲ್ ತಿಂಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಐಎಎಸ್ , ಕೆಎಎಸ್ ಕೋಚಿಂಗ್ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಉದ್ಯಮಿ ಮಲ್ಲನಗೌಡ ಓಲಿ, ಬಸನಗೌಡ ಮಾಲಿ ಪಾಟೀಲ್, ಚಂದ್ರಶೇಖರ ನಾಲತವಾಡ, ಮಾಲತಿ ನಾಯಕ, ರಾಯಚೂರ ಜಿಲ್ಲಾ ಕೆಪಿಸಿಸಿ ಸಂಯೋಜಕ ಆದೇಶ ನಾಯಕ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹನುಮನಗೌಡ, ಮುಖಂಡರಾದ ರಮೇಶ ನಾಯಕ, ವಿಕ್ರಮ್ ರಾಯ್ಕರ್, ವೀರನಗೌಡ ಪಾಟೀಲ್, ದುರುಗೇಶ ನಾರಿನಾಳ, ರುದ್ರಗೌಡ ಪಾಟೀಲ್, ಲಿಂಗರಾಜ ಹಂಚಿನಾಳ, ಅಮರೇಶ ಕುಂಬಾರ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

Share this Article
error: Content is protected !!