ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ,, ಸಂಸದ ಸಂಗಣ್ಣ ಕರಡಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ:- ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದಾಗಿ ಈ ಬಾರಿಯೂ ಕೂಡ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು,

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ರೈತಪರ ಯೋಜನೆಗಳಿಂದಾಗಿ ಹಾಗೂ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಜನರು ಈ ಬಾರಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಜೊತೆಗೆ ದೊಡ್ಡನಗೌಡ ಪಾಟೀಲ್ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಹೇಳಿದರು.

ಮೊದಲಿಗೆ ಬಿಜೆಪಿ ಸಂಕಲ್ಪ ಯಾತ್ರೆಯನ್ನು ಸಚಿವರಾದ ಹಾಲಪ್ಪ ಆಚಾರ್ ಪಟ್ಟಣದ ಅಂಬೇಡ್ಕರ್ ರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಯನ್ನು ಬರಮಾಡಿಕೊಂಡರು ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಶರಣಪ್ಪ, ಮುಖಂಡರಾದ ಬಸವರಾಜ್ ಹಳ್ಳೂರ್, ಕೆ ಮಹೇಶ್, ವೀರಭದ್ರಪ್ಪ ನಾಲತವಾಡ, ಶೇಖರಗೌಡ ಪೊಲೀಸ್ ಪಾಟೀಲ್, ಸಾಗರ್ ಬೇರಿ, ನಾದಿರ ಪಾಷಾ ಮುಲ್ಲಾ, ಮಲ್ಲನಗೌಡ ಓಲಿ, ಶಿವರಾಜ್ ಗೌಡ ಪೊಲೀಸ್ ಪಾಟೀಲ್, ಶಶಿಧರ್ ಪಾಟೀಲ್, ಬಸನಗೌಡ ಓಲಿ, ಮಂಜುನಾಥ್ ಜೂಲಕುಂಟಿ, ಅರುಣ್ ನಾಲತವಾಡ, ರಮೇಶ ಗಿರಣಿ, ನಾರಾಯಣ ಸಿಂಗ್ ಸೇರಿದಂತೆ  ಇನ್ನಿತರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Share this Article
error: Content is protected !!