ರಾಜಕೀಯವಾಗಿ ನನ್ನನ್ನು ಮುಗಿಸಲು ಸಾಧ್ಯವಿಲ್ಲ, ಜನಾರ್ಧನ ರೆಡ್ಡಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ:- ಬಿಜೆಪಿ  ಪಕ್ಷದವರು ಹಾಗೂ ನನ್ನ ಹಿತೈಷಿಗಳು ಸೇರಿದಂತೆ ರಾಜಕೀಯವಾಗಿ ನನ್ನನ್ನು ಮುಗಿಸಲು ಪ್ರಯತ್ನ ಪಟ್ಟರೂ, ಕೂಡ ದೇವರ ಆಶೀರ್ವಾದದಿಂದಾಗಿ ನಾನು ಇಂದು ಸ್ವಂತ ಪಕ್ಷ ಕಟ್ಟಿ, ಜನ ಸೇವೆ ಮಾಡಲು ಸಿದ್ದನಾಗಿ ಬಂದಿದ್ದೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಜಿಲ್ಲೆಯ ಕನಕಗಿರಿಯಲ್ಲಿ ಹೇಳಿದರು.

ಅವರು ಬುಧವಾರದಂದು ಕನಕಗಿರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿ , ನಾನು ಜೈಲಿನಲ್ಲಿದ್ದಾಗ ಅನುಭವಿಸಿದ ಕಷ್ಟಕ್ಕೆ ನನ್ನ ಪರವಾಗಿ ಯಾರು ನಿಲ್ಲಲಿಲ್ಲ ಹಾಗಾಗಿ ನಾನು ಸ್ವಂತ ಪಕ್ಷವನ್ನು ಕಟ್ಟಿ ಕಲ್ಯಾಣ ಕರ್ನಾಟಕ ದ ಜನರ ಅಭಿವೃದ್ಧಿ ಗಾಗಿ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೆನೆ, ಈಗಾಗಲೇ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನಕಗಿರಿ ಕ್ಷೇತ್ರದ ಆಕಾಂಕ್ಷಿ ಆಗಿರುವ ಚಾರುಲ್ ವೆಂಕಟರಮಣ ದಾಸರಿ ಇವರನ್ನು ಬೆಂಬಲಿಸುವ ಮೂಲಕ ಬಹುಮತದಿಂದ ಆರಿಸಿ ತರಬೇಕೆಂದು ಹೇಳಿದರು.

ಈದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಕೆಆರ್ ಪಿ ಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.

Share this Article
error: Content is protected !!