ಗಜಲ್ ಗೋಷ್ಠಿಯ ಅಧ್ಯಕ್ಷರಾಗಿ, ಅಲ್ಲಾಗಿರಿರಾಜ ಆಯ್ಕೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ :- ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ . ಮಾರ್ಚ್ 11 ರಂದು ನಡೆಯುವ ಗಜಲ ಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಖ್ಯಾತ ಗಜಲ್ ಕವಿ ಹಾಗೂ ಸಾಹಿತಿಗಳಾದ ಕನಕಗಿರಿಯ ಅಲ್ಲ ಗಿರಿರಾಜ್ ಅವರು ವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.


ಅದೇ ರೀತಿ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ್ ಎಸ್ ಪಾಟೀಲ್ ಉದ್ಘಾಟಿಸಲಿದ್ದಾರೆ. ಗಜಲ್ ಗೋಷ್ಠಿಯಲ್ಲಿ ಕವಿಗಳಾದ ಸಹದೇವ ಯರಗೊಪ್ಪ, ವಿಜಯಲಕ್ಷ್ಮಿ ಕೊಟಗಿ, ಅನುಸೂಯ ಜಾಗರಿದಾರ್, ಅರುಣ ನರೇಂದ್ರ, ರಮೇಶ್ ಗಬ್ಬೂರ, ಬಸವರಾಜ್ ಸಂಕನಗೌಡ, ಇಮಾಮ್ ಸಾಬ್ ಹ‌ಡಗಲಿ. ಮಹಿಬೂಬ್ ಮಠದ. ಎಸ್ ಬಿ ಸ್ವಾಮಿ ಹಾಗೂ ಶಿವಶಂಕರ್ ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Share this Article
error: Content is protected !!