ಆಸ್ತಿಗಾಗಿ ಹೆತ್ತ ತಂದೆಯನ್ನೆ ಕೊಲೆ ಮಾಡಿದ, ಪಾಪಿ ಮಗ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:– ಮಕ್ಕಳಿಗಾಗಿ ಆಸ್ತಿ ಮಾಡಬೇಕೆಂಬುದು ಪ್ರತಿಯೊಬ್ಬರ ಕರ್ತವ್ಯ ವಾಗಿದ್ದು, ಅದರಂತೆ ತಾತ (ಅಜ್ಜ) ನೊಬ್ಬ ಪಿತ್ರಾರ್ಜಿತ ಆಸ್ತಿ ಮೊಮ್ಮಕ್ಕಳ ಪಾಲಾಗಲೆಂದು ಬಯಸಿದ್ದಕ್ಕೆ ತನ್ನ ಸ್ವಂತ ಮಗನಿಂದಲೇ ಹತ್ಯೆಯಾದ ದಾರುಣ ಘಟನೆ ನಡೆದಿರುವುದು ಮನುಕುಲಕ್ಕೆ, ಕಳಂಕ.

ಘಟನೆ ವಿವರ:– ಪಿತ್ರಾರ್ಜಿತ ಆಸ್ತಿ ಮಕ್ಕಳ ಪಾಲಾಗುತ್ತದೆ ಎಂಬ , ಕೊಲೆ ಗಡುಕ ಮಗನೊಬ್ಬ ತನ್ನ ಹೆತ್ತ ತಂದೆಯನ್ನೆ ಕೊಲೆ ಮಾಡಿದ ಘಟನೆ ತಾಲೂಕಿನ ಹಿರೇ ಬನ್ನಿಗೋಳ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ದ್ಯಾಮಣ್ಣ ಮುರಡಿ (63) ಎಂದು ಗುರುತಿಸಲಾಗಿದೆ.

ಕೊಲೆಯಾದ ವ್ಯಕ್ತಿಯ ಸೊಸೆ ಮೀನಾಕ್ಷಿ (34) ಹೊಟ್ಟೆನೋವು ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು ಆಕೆಯ ತವರು ಮನೆಯವರು ಹಾಗೂ ಹಿರೇ ಬನ್ನಿಗೋಳ ಗ್ರಾಮಸ್ಥರು ಸೇರಿಕೊಂಡು ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಗಂಡನ ಮನೆಯ ಆಸ್ತಿಯನ್ನು , ಮಕ್ಕಳ ಹೆಸರಲ್ಲಿ ಮಾಡಬೇಕೆಂದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು , ಆದರೆ ಕಟುಕ ಕೊಲೆಗಡುಕ ಭೀಮಪ್ಪ (37) ನನಗೆ ಆಸ್ತಿ ಸಿಗುವುದಿಲ್ಲ ಎಂಬ ದುರಾಸೆ ಯಿಂದಾಗಿ ತನ್ನ ತಂದೆಯನ್ನು ಕತ್ತು ಹಿಸುಕುವ ಮೂಲಕ ಕೊಲೆ ಮಾಡಿದ್ದು ಈ ಕುರಿತು ಅವನ ವಿರುದ್ದ ಹಡೆದ ತಾಯಿ ಯಲ್ಲವ್ವ ದ್ಯಾಮಣ್ಣ ಮುರುಡಿ , ತನ್ನ ಮಗನ ಮೇಲೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ, ಈ ಕುರಿತು ಪೊಲೀಸರು ಆರೋಪಿತನನ್ನು ಬಂದಿಸಿದ್ದಾರೆ.

ಒಂದೆ ಮನೆಯಲ್ಲಿ ಎರಡು ಸಾವು:- ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭೀಮಪ್ಪ ನು ತನ್ನ ಹೆಂಡತಿ ಮೃತ ಪಟ್ಟಿದ್ದರು ಕೂಡ, ಮಾನವೀಯತೆ ಮರೆತು ತನ್ನ ಸ್ವಾರ್ಥಕ್ಕಾಗಿ, ತನ್ನ ಮಕ್ಕಳಿಗೆ ಆಸ್ತಿ ಸಿಗುತ್ತದೆಂಬ ದುರೂದ್ದೇಶ ದಿಂದ ಸಂಬಂಧವನ್ನು ಮರೆತು ನೀಚ ಕೃತ್ಯ ಮೆರೆದಿರುವ ಅಮಾನವೀಯ ಘಟನೆ ನಡೆದಿರುವುದು ಹಾಗೂ ಒಂದೆ ಮನೆಯಲ್ಲಿ , ಒಂದೆ ದಿನದ ಅಂತರದಲ್ಲಿ ಇಬ್ಬರ ಸಾವಾಗಿರುವುದು ಇಡೀ ರಾಜ್ಯದ ಜನರಿಗೆ ಬೆಚ್ಚಿ ಬೀಳಿಸುವಂತಾಗಿದ್ದು, ರಕ್ತ ಸಂಭಂದಕ್ಕೆ ಬೆಲೆಯಿಲ್ಲದಂತಾಗಿರುವುದು ಖಂಡನೀಯ..

Share this Article
error: Content is protected !!