19 ಲಕ್ಷ ಮೌಲ್ಯದ ಬಂಗಾರ ಕಳ್ಳರ ಬಂಧನ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:– ಪಟ್ಟಣ ಹಾಗೂ ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಗಲು ಹಾಗೂ ರಾತ್ರಿ ವೇಳೆ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದ್ದು , ಬಂಧಿತರಿಂದ 19 ಲಕ್ಷ ರೂ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ಕಳ್ಳತನ ಕ್ಕೆ ಬಳಸಿದ ಕಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಂಗಾವತಿ ಡಿವಾಯಎಸ್ ಪಿ ಶೇಖರಪ್ಪ ಎಚ್ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಕಳ್ಳತನದ ಮೂಲಕ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಕಳ್ಳ ರನ್ನು ಪತ್ತೆ ಹಚ್ಚುವಲ್ಲಿ ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ ನೇತೃತ್ವದಲ್ಲಿ ತಂಡವನ್ನು ರಚಿಸಿ ಪ್ರಕರಣ ಭೇದಿಸುವಲ್ಲಿ ನಮ್ಮ ಸಿಬ್ಬಂದಿಯು ಯಶಸ್ವಿ ಯಾಗಿದ್ದು ಶ್ಲಾಘನೀಯ ಎಂದು ಹೇಳಿದರು. ಬಂಧಿತ ಅಂತರ ಜಿಲ್ಲಾ ಕಳ್ಳರಾದ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸಿದ್ದರಾಮ ಪೂಜಾರಿ, ಗಂಗಾರಾಮ ಚೌವ್ಹಾಣ, ಗುಲಾಬ್ ಚೌವ್ಹಾಣ, ಹೀರಾಚಂದ ಪಾಟೀಲ್ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಪ್ರಕರಣ ಭೇದಿಸುವಲ್ಲಿ ತಾವರಗೇರಾ ಠಾಣೆಯ ಪಿಎಸ್ ಐ ತಿಮ್ಮಣ್ಣ ನಾಯಕ, ಕುಷ್ಟಗಿ ಠಾಣೆಯ ಪಿಎಸ್ ಐ ಮೌನೇಶ ರಾಠೋಡ ಹಾಗೂ ಎಎಸ್ ಐ ಗಳಾದ ಮಲ್ಲಪ್ಪ ಹಾಗೂ ವಸಂತ, ಸಿಬ್ಬಂದಿಗಳಾದ ಗುಂಡಪ್ಪ, ಪ್ರಶಾಂತ, ಹನುಮಂತ, ಸಂಗಮೇಶ, ಅಮರೇಶ, ಕೊಟೇಶ, ಹಾಗೂ ತನಿಖಾ ಸಹಾಯಕರಾದ ದುರುಗಪ್ಪ ಎಎಸ್ ಐ , ಎಚ್ ಸಿ ಎಂಬಿ ಹಿನಾಯತ್, ಕಾರ್ಯವೈಖರಿ ಗೆ ಇಲಾಖೆಯು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

Share this Article
error: Content is protected !!