ತಾವರಗೇರಾ:- ಜನ ಮನ ಸೆಳೆದ ಕಲ್ಲು ಎಳೆಯುವ ಸ್ಫರ್ಧೆ ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ 1.5 ಟನ್ ಭಾರ ತೂಕದ ಕಲ್ಲು ಎಳೆಯುವ ಸ್ಪರ್ಧೆ ಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು ವಿಶೇಷ ವಾಗಿತ್ತು.

ಸ್ಪರ್ಧೆಯಲ್ಲಿ ಒಟ್ಟು 9 ಜೊತೆ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು 215 ಮೀಟರ್ ದೂರದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವನ್ನು ಚಿಕ್ಕ ಬೇರಿಗೆಯ ಯಂಕಪ್ಪ ಅವರ ಎತ್ತುಗಳು 1 ನಿಮಿಷ 24 ಸೆಕೆಂಡ್ ಗಳಲ್ಲಿ ಎಳೆಯುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡರು.

ಅದೇರೀತಿ ಪಟ್ಟಣದ ಚಾಂದಸಾಬ ಪತ್ತಾರ ಸಾಬ ಇವರು ಎತ್ತುಗಳು 1 ನಿಮಿಷ 33 ಸೆಕೆಂಡ್ ನಲ್ಲಿ ಎಳೆಯುವ ಮೂಲಕ ದ್ವೀತಿಯ ಸ್ಥಾನ ವನ್ನು ಪಡೆದುಕೊಂಡವು, ಅದೇರೀತಿ ಹನುಮಂತಪ್ಪ ಗುರುಗುಂಟ ಇವರ ಎತ್ತುಗಳು 2 ನಿಮಿಷ 6 ಸೆಕೆಂಡ್ ನಲ್ಲಿ ಎಳೆಯುವ ಮೂಲಕ ತೃತೀಯ ಸ್ಥಾನವನ್ನು ಪಡೆದುಕೊಂಡವು.

ಪ್ರಥಮ ಬಹುಮಾನವಾಗಿ ಎಪಿಎಮ್ ಸಿ ವತಿಯಿಂದ 5 ಗ್ರಾಂ ಚಿನ್ನ ವನ್ನು ನೀಡಲಾಗಿತ್ತು, ದ್ವಿತೀಯ ಬಹುಮಾನವಾಗಿ 15 ತೊಲೆ ಬೆಳ್ಳಿ ಕಡಗ ಹಾಗೂ ತೃತೀಯ ಬಹುಮಾನ ವಾಗಿ ಕಿತ್ತೂರರಾಣಿ ಚೆನ್ನಮ್ಮ ಯುವಕ ಸಂಘದ ವತಿಯಿಂದ 11 ತೊಲಿ ಬೆಳ್ಳಿ ಕಡಗ ನೀಡಲಾಯಿತು. ಸ್ಪರ್ಧೆಯಲ್ಲಿ ಸಾವಿರಾರು ಜನ ರೈತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಸದಸ್ಯರು ಸೇರಿದಂತೆ ಊರಿನ ಪ್ರಮುಖರು ಪಾಲ್ಗೊಂಡಿದ್ದರು.

Share this Article
error: Content is protected !!