ಸಾಮಾಜಿಕ ಜಾಲತಾಣದಿಂದ ಮುಸ್ಲಿಂ ಯುವಕ, ಹಿಂದೂ ಯುವತಿ ಮದುವೆ..!

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಸಾಮಾಜಿಕ ಜಾಲತಾಣ ವಾದ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯಗೊಂಡ ಹೈದರಾಬಾದ್ ಮೂಲದ ಮುಸ್ಲಿಂ ಯುವಕ ಹಾಗೂ ಕುಷ್ಟಗಿಯ ಹಿಂದೂ ಯುವತಿಯ ಪ್ರೇಮ ಪ್ರಕರಣವೊಂದು ಮದುವೆ ಆಗುವದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಪಡೆದ ಘಟನೆ ಶನಿವಾರದಂದು ಜರುಗಿದೆ.

ಡಿಸೆಂಬರ್ 12 ರಂದು ಕುಷ್ಟಗಿ ಪಟ್ಟಣದ ನಿವಾಸಿಯಾಗಿದ್ದ ಅಂಜನಾ (22) (ಹೆಸರು ಬದಲಾಯಿಸಲಾಗಿದ್ದು) ನಾಪತ್ತೆ ಪ್ರಕರಣ ದಾಖಲಾಗಿತ್ತು, ದಾಖಲಾಗಿದ್ದ ಹಿನ್ನಲೆಯಲ್ಲಿ ಪ್ರಕರಣವನ್ನು ಪತ್ತೆ ಹಚ್ಚಲು ಯಶಸ್ವಿಯಾದ ಪೊಲೀಸರು.

ಹೈದರಾಬಾದ್ ಮೂಲದ ಷೇಕ್ ವಾಹಿದ್ ಎಂಬ ಇಂಜಿನಿಯರ್ ವಿದ್ಯಾರ್ಥಿಯೊಂದಿಗೆ ಕುಷ್ಟಗಿಯ ಯುವತಿಯು ಕಳೆದ ನಾಲ್ಕು ವರ್ಷಗಳಿಂದ ಹುಡುಗನ ಜೊತೆ ಸಂಪರ್ಕ ಹೊಂದಿದ್ದು, ತಿಳಿದು ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಿಸಲಾಗಿ ಯುವತಿಯು ಡಿಸೆಂಬರ್ 19 ರಂದು ಹೈದರಾಬಾದ್ ನಲ್ಲಿ ಮದುವೆ ಆಗಿರುವುದಾಗಿ ಒಪ್ಪಿಕೊಂಡಿದ್ದಾಳೆಂದು ತಿಳಿದುಬಂದಿದೆ.

Share this Article
error: Content is protected !!