ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿರುವ ಶಾಸಕ ಬಯ್ಯಾಪೂರ,– ದೊಡ್ಡನಗೌಡ ಪಾಟೀಲ್..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ರಾಜಕಾರಣವನ್ನು ವ್ಯಾಪಾರಿಕರಣ ಮಾಡಿಕೊಂಡಿರುವ ಶಾಸಕ ಅಮರೇಗೌಡ ಬಯ್ಯಾಪೂರ ಗೆ ಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆಯೇ ಧಮ್ಮು- ತಾಕತ್ತು ತೋರಿಸಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದರು.


ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ 1300 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗೆ ವಹಿಸುವಂತೆ ಶಾಸಕ ಅಮರೇಗೌಡ ಬಯ್ಯಾಪೂರ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ ದೊಡ್ಡನಗೌಡ ಪಾಟೀಲ್ ಅವರು ಅವರ ಸಂಬಂಧಿಕರಿಗೆ ಕಾಮಗಾರಿ ನೀಡಿದ್ದು ಅದನ್ನು ಸಿಬಿಐ ಗೆ ಕೊಡುವ ಅವಶ್ಯಕತೆ ಇಲ್ಲ, ಈ ಬಗ್ಗೆ ಕ್ಷೇತ್ರದ ಜನರಿಗೆ ಮಾಹಿತಿ ಇದೆ, ಅವರೇ ಇವರಿಗೆ ಬುದ್ದಿ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.

Share this Article
error: Content is protected !!