ತಾವರಗೇರಾ:- ಮನೆ ಬೀಗ ಮುರಿದು, ಬಂಗಾರ ಕಳ್ಳತನ..!

N Shameed
0 Min Read

 

ವರದಿ‌ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ವಿಶ್ವೇಶ್ವರಯ್ಯ ನಗರ ಮನೆಯೊಂದರಲ್ಲಿ ಕಳ್ಳರು ಮನೆಯ ಬೀಗ ಮುರಿದು ಬಂಗಾರ ಹಾಗೂ ನಗದು‌ ಹಣ ಕಳವು ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪರಶುರಾಮ ಕಳಕಪ್ಪ ಉಪ್ಪಳ ಎಂಬುವವರ ಮನೆಯಲ್ಲಿ ಬಂಗಾರದ ಸುತ್ತುಂಗುರ, ಬಂಗಾರದ ಡೋರ್, ಬೆಂಡೊಲಿ ಸೇರಿದಂತೆ ನಗದು ಹಣ 65 ಸಾವಿರ ರೂ ಒಟ್ಟು 1 ಲಕ್ಷ 45 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣ ಹಾಗೂ ನಗದು ಹಣವನ್ನು ಕಳ್ಳರು ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದು ಸದರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!