ದೀಪಾವಳಿ ದಿನದಂದೆ, ಇಬ್ಬರು ಬಾಲಕರು ನೀರು ಪಾಲು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ದೀಪಾವಳಿ ಹಬ್ಬದ ದಿನದಂದೇ ತಾಲೂಕಿನ ನಿಲೋಗಲ್ ಸಮೀಪದ ರಾಂಪುರ ಗ್ರಾಮದ ಇಬ್ಬರು ಬಾಲಕರು ನೀರು ಪಾಲಾಗಿ ಮೃತಪಟ್ಟ ದುರ್ದೈವ ಘಟನೆ ನಡೆದಿದೆ.

ಮೃತ ಬಾಲಕರನ್ನು ರಾಂಪುರ ಗ್ರಾಮದ ಮಹಾಂತೇಶ ಮಲ್ಲಪ್ಪ ಮಾದರ (9) ಹಾಗೂ ವಿಜಯ ಮಾದರ (9) ನೀರು ಪಾಲಾಗಿರುವ ನತದೃಷ್ಟ ಬಾಲಕರು ಎಂದು ಗುರುತಿಸಲಾಗಿದ್ದು , ಗ್ರಾಮದ ವಕ್ಕನದುರ್ಗಾ ರಸ್ತೆಗೆ ಹೊಂದಿರುವ ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಬೃಹತ್ ಆಕಾರದ ಗುಂಡಿಯಲ್ಲಿನ ನೀರಿನಲ್ಲಿ ಕಾಲು ಜಾರಿ ಬಿದ್ದಿರುವುದಾಗಿ ತಿಳಿದು ಬಂದಿದೆ.

ಗುಂಡಿಗೆ ಜಾರಿ ಬಿದ್ದಿದ್ದ ನಾಲ್ಕು ಜನ ಬಾಲಕರ ಪೈಕಿ ಇಬ್ಬರು ಬದುಕುಳಿದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,

Share this Article
error: Content is protected !!